ಹೈದರಾಬಾದ್(ಫೆ.09): ಹಣೆಬರಹ ಗಟ್ಟಿ ಇದ್ರೆ ಯಮಧರ್ಮರಾಯ ಕೂಡ ಏನು ಮಾಡಲಾಗಲ್ಲ ಅನ್ನೋದು ನಿಜ ನೋಡಿ. ಇದು ಹೈದರಾಬಾದ್ TO ಲಂಡನ್ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿದ್ದ ಪ್ರಯಾಣಿಕರ ಪಾಲಿಗಂತೂ ಅಕ್ಷರಶಃ ಸತ್ಯ.

ಹೈದರಾಬಾದ್‌ನಿಂದ ಲಂಡನ್‌ಗೆ ಹೊರಡಲಿದ್ದ ಬ್ರಿಟಿಷ್ ಏರ್‌ವೇಸ್‌ಗೆ ಸೇರಿದ 276 ವಿಮಾನ, ರನ್‌ವೇ ಬಳಿ ವೀಲ್ ಬೌನ್ಸ್ ಆಗಿ ಆತಂಕ ಸೃಷ್ಟಿಸಿತ್ತು. ಇನ್ನೇನು ವಿಮಾನ ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ಚಕ್ರಗಳು ನೆಲಕ್ಕೆ ಅಪ್ಪಳಿಸಿ ಮತ್ತೆ ಪುಟಿದಿವೆ.

ಕೂಡಲೇ ಎಚ್ಚೆತ್ತ ಪೈಲೆಟ್ ವಿಮಾನವನ್ನು ಕ್ಷಣಾರ್ಧದಲ್ಲಿ ಮೇಲಕ್ಕೆ ಹಾರಿಸಿ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಬಳಿಕ ಮತ್ತೆ ವಿಮಾನವನ್ನು ಏರ್‌ಪೋರ್ಟ್‌ಲ್ಲಿ ಇಳಿಸಿ ಕೆಲ ಸಮಯದ ಬಳಿಕ ಮತ್ತೆ ಲಂಡನ್‌ನತ್ತ ಪ್ರಯಾಣ ಬೆಳೆಸಿತು.