ಕೋಲ್ಕತ್ತಾ[ಡಿ.06]: ಕೊಲ್ಕತ್ತಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯು ತನ್ನ ಪತಿ ವಿರುದ್ಧವೇ ಅತ್ಯಾಚಾರ ಆರೋಪವೆಸಗಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಗಂಡ ತನ್ನ ಅನುಮತಿ ಇಲ್ಲದೇ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದಾನೆ ತಾನು ಗರ್ಭಿಣಿ ಎಂದು ತಿಳಿದ ಬಳಿಕವೂ ತನ್ನ ಪತಿ  ದೈಹಿಕವಾಗಿ ಹಿಂಸೆ ನೀಡುತ್ತಿದ್ದಾನೆಂದು. ಅಲ್ಲದೇ ತನ್ನ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳವನ್ನೂ ನೀಡುತ್ತಿದ್ದಾರೆಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. 

ಕಾನೂನು ತಜ್ಞರು ಈ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾ ಪತ್ನಿಯೊಬ್ಬಳು ಕೌಟುಂನಿಕ ಹಿಂಸೆಯಡಿಯಲ್ಲಿ ನೀಡಿದ ದೂರಿನಲ್ಲಿ ತನ್ನ ಪತಿಯೇ ಅತ್ಯಾಚಾರವೆಸಗುತ್ತಿದ್ದಾನೆಂದು ಆರೋಪವೆಸಗಿದ್ದು ಇದೇ ಮೊದಲು ಎಂದಿದ್ದಾರೆ. ಇನ್ನು ಮದುವೆಯ ಸಂದರ್ಭದಲ್ಲಿ ಹುಡುಗ ಖಾಸಗಿ ಬ್ಯಾಂಕ್ ಒಂದರಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಯುವತಿಯ ಕುಟುಂಬಕ್ಕೆ ತಿಳಿಸಿದ್ದರು. ಆದರೆ ಮದುವೆಯಾಗಿ ಗಂಡನ ಮನೆಗೆ ತಲುಪಿದಾಗಲೇ ತನ್ನ ಗಂಡ ಚಿಕ್ಕ ಕಂಪೆನಿಯೊಂದರಲ್ಲಿ ಕೆಳ ವರ್ಗದ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿಡುವ ವಿಚರ ಯುವತಿಗೆ ಗೊತ್ತಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಆತ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ್ದ ಎಂಬುವುದು ಮಹಿಳೆಯ ಆರೋಪವಾಗಿದೆ.

ಮೋಸ ಹೋದ ಮಹಿಳೆ ತನ್ನ ಗಂಡನನ್ನು ಕಡೆಗಣಿಸಲಾರಂಭಿಸಿದ್ದಾಳೆ. ಇದರಿಂದ ಕೋಪಗೊಂಡ ಗಂಡ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದಾನೆ, ಸಾಲದೆಂಬಂತೆ ಅತನ ಕುಟುಂಬಸ್ಥರೂ ಕಿರುಕುಳ ನೀಡಲೂ ಆರಂಭಿಸಿದ್ದಾರೆ. ಹೀಗಿರುವಾಗ ಬೇರೆ ದಾರಿ ಕಾಣದ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಸದ್ಯ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯು 'ನಾವು ಎಲ್ಲಾ ದಿಕ್ಕಿನಿಂದಲೂ ಈ ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ. ಇದಕ್ಕಾಗಿ ಕಾನೂನಿನ ಸಹಾಯವನ್ನೂ ಪಡೆಯುತ್ತಿದ್ದೇವ. ಹೀಗಿರುವಾಗ ಈಗಲೇ ನಾವು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ' ಎಂದಿದ್ದಾರೆ.

ಸದ್ಯ ದೂರು ನೀಡಿರುವ ಮಹಿಳೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗಂಡನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿದ್ದಾಳೆ.