Asianet Suvarna News Asianet Suvarna News

ಆಂಬಿಡೆಂಟ್​​ ಕೇಸ್‌: ಜನಾರ್ದನ ರೆಡ್ಡಿಯನ್ನ ಸಿಕ್ಕಿಸಿದ್ದು ಆ ಒಂದು ಫೋನ್ ಕಾಲ್..!

ಕೋಟಿ ಕೋಟಿ ಆಂಬಿಡೆಂಟ್ ಡೀಲ್​​ ಕೇಸ್​​ ಸಿಸಿಬಿ​​ಗೆ ಹೋಗಿದ್ದೇ ರೋಚಕ. ಆಂಬಿಡೆಂಟ್​​ ಕೇಸ್​ ಸಿಸಿಬಿಗೆ ವರ್ಗಾವಣೆ ಆಗಿದ್ದು ಹೇಗೆ ಗೊತ್ತಾ..? ಆಂಬಿಡೆಂಟ್​ ಕೇಸ್​ ಬಗ್ಗೆ ಮುತುವರ್ಜಿ ವಹಿಸಿದ್ದು ಯಾರು ಗೊತ್ತಾ..? ಇಲ್ಲಿದೆ ಪಿನ್ ಟು ಪಿನ್ ಮಾಹಿತಿ.
 

How to reopening  Janardhan Reddy in connection with Ambident fraud case
Author
Bengaluru, First Published Nov 8, 2018, 7:19 PM IST

ಬೆಂಗಳೂರು, [ನ,08]: ಹೆಚ್ಚು ಮೊತ್ತದ ಬಡ್ಡಿ ನೀಡುವುದಾಗಿ  ಗ್ರಾಹಕರಿಗೆ  600 ಕೋಟಿಗೂ ಹೆಚ್ಚು ಹಣ ವಂಚಿಸಿದ್ದ ಆಂಬಿಡೆಂಟ್​ ಕಂಪನಿ ಮಾಲೀಕ ಫರೀದ್​ ಕೇಸ್​ ಸಿಸಿಬಿ ಕೈ ಸೇರಿದ್ದು ಹೇಗೆ ಎಂಬ ಸ್ಫೋಟಕ ಸುದ್ದಿಯನ್ನ ಸುವರ್ಣನ್ಯೂಸ್​ ಬಯಲುಮಾಡಿದೆ. 

ಆಂಬಿಡೆಂಟ್​ ಕಂಪನಿಯಿಂದ ಮೋಸ ಹೋದವರು ಅಕ್ಟೋಬರ್​ 7ರಂದು ನ್ಯಾಯಕ್ಕಾಗಿ ಜೆಡಿಎಸ್​ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರು.  ಸಂತ್ರಸ್ಥರ ಮೊರೆ ಆಲಿಸಿದ ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರು ಅಂದೇ ಸಿಸಿಬಿ ಆಯುಕ್ತ ಕಲೋಕ್​ ಕುಮಾರ್​​ಗೆ ಕರೆ ಮಾಡಿ ನ್ಯಾಯ ಒದಗಿಸುವಂತೆ ಹೇಳಿದ್ರು. 

ಮೆಗಾ ಡೀಲ್‌: ಜನಾರ್ದನ ರೆಡ್ಡಿ ಸಿಕ್ಕಿಬಿದ್ದದ್ದು ಹೀಗೆ!

ದೇವೇಗೌಡರ ಕರೆಯಿಂದ ಎಚ್ಚೆತ್ತ ಅಲೋಕ್​ಕುಮಾರ್ ಬೆಂಗಳೂರು ನಗರ ಕಮಿಷನರ್​ ಮೂಲಕ ಅಧಿಕೃತವಾಗಿ ಡಿಜೆ ಹಳ್ಳಿ ಠಾಣೆಯಿಂದ ಕೇಸ್​ ಅನ್ನು ಸಿಸಿಬಿಗೆ ವರ್ಗಾಯಿಸಿಕೊಂಡಿದ್ರು. ಅಕ್ಟೋಬರ್​ 23ರಂದು  ಫೈಲ್​ ಸಿಸಿಬಿ ಕೈ ಸೇರಿದ್ದು ಎರಡೇ ದಿನಕ್ಕೆ  ಫರೀದ್​ನನ್ನ ಸಿಸಿಬಿ ಪೊಲೀಸ್ರು ಬಂಧಿಸಿ ವಿಚಾರಣೆ ನಡೆಸಿದ್ದರು.

ಈ ವೇಳೆ ಜನಾರ್ದನ ರೆಡ್ಡಿ ಲಿಂಕ್ ಇದೆ ಎನ್ನುವ ಮಹಿತಿ ತಿಳಿಯುತ್ತಿದ್ದಂತೆಯೇ ಸಿಸಿಬಿ ಪೊಲೀಸ್ ಈ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದೆ. ಉಪಚುನಾವಣೆ ಹಿನ್ನಲೆಯಲ್ಲಿ ರೆಡ್ಡಿಯನ್ನ ಬಂಧಿಸದಂತೆ ಕರೆಗಳೂ ಬಂದಿವೆ. ಇದ್ರಿಂದ ಉಪಚುನಾವಣೆ ಫಲಿತಾಂಶ ಹೊರ ಬಿದ್ದ ಮರುದಿನವೇ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಬೆನ್ನುಬಿದ್ದಿದ್ದಾರೆ. 

ಬೆಂಗಳೂರು ಹಾಗೂ ಬಳ್ಳಾರಿಯಲ್ಲಿರುವ ರೆಡ್ಡಿ ನಿವಾಸದ ಮೇಲೆ ದಾಳಿ ಮಾಡಿ ಕಾರ್ಯಚರಣೆ ನಡೆಸಿದೆ.  ಆದರೆ, ಈ ವಿಷಯ ತಿಳಿಯುತ್ತಿದ್ದಂತೆಯೇ ರೆಡ್ಡಿ ತಲೆಮರಿಸಿಕೊಂಡಿದ್ದು, ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ.

Follow Us:
Download App:
  • android
  • ios