ನಮ್ಮ ದೇಶದ ಸಾಲ 1 ಕೋಟಿ ಕೋಟಿ ರು.!

How much loan does India have
Highlights

ಶರವೇಗದಲ್ಲಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಭಾರತ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಸಾಲವನ್ನೂ ಮಾಡಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಎಚ್ಚರಿಕೆ ನೀಡಿದ್ದು, ಅದರಲ್ಲಿ ನಮ್ಮ ದೇಶದ ಸಾಲ ಇಲ್ಲಿನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ.70.2ರಷ್ಟಿದೆ ಎಂಬ ಅಚ್ಚರಿಯ ಸಂಗತಿಯನ್ನು ಹೊರಗೆಡವಿದೆ.

ನವದೆಹಲಿ: ಶರವೇಗದಲ್ಲಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಭಾರತ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಸಾಲವನ್ನೂ ಮಾಡಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಎಚ್ಚರಿಕೆ ನೀಡಿದ್ದು, ಅದರಲ್ಲಿ ನಮ್ಮ ದೇಶದ ಸಾಲ ಇಲ್ಲಿನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ.70.2ರಷ್ಟಿದೆ ಎಂಬ ಅಚ್ಚರಿಯ ಸಂಗತಿಯನ್ನು ಹೊರಗೆಡವಿದೆ.

ಐಎಂಎಫ್‌ ನೀಡಿರುವ ಈ ಅಂಕಿಅಂಶಗಳು 2016ನೇ ಇಸ್ವಿಯವು. 2016ರಲ್ಲಿ ಭಾರತದ ಜಿಡಿಪಿ ಗಾತ್ರ 147 ಲಕ್ಷ ಕೋಟಿ ರು. ಇತ್ತು. ಅದರ ಶೇ.70ರಷ್ಟುಅಂದರೆ ಸುಮಾರು 100 ಲಕ್ಷ ಕೋಟಿ ರು. ಆಗುತ್ತದೆ. ಅರ್ಥಾತ್‌, 2016ರಲ್ಲಿ ಭಾರತದ ಸಾಲ 1 ಕೋಟಿ ಕೋಟಿ ರುಪಾಯಿ ಆಗಿತ್ತು.

ಐಎಂಎಫ್‌ ಕೇವಲ ಭಾರತಕ್ಕೊಂದೇ ಈ ಎಚ್ಚರಿಕೆ ನೀಡಿಲ್ಲ, ಜಗತ್ತಿನ ಒಟ್ಟಾರೆ ಸಾಲವೇ ಎಲ್ಲಾ ದೇಶಗಳ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.225ಕ್ಕೆ ತಲುಪಿದೆ. ಅಂದರೆ, ಜಗತ್ತಿನ ಎಲ್ಲಾ ದೇಶಗಳೂ ಸೇರಿ 106 ಕೋಟಿ ಕೋಟಿ ರು.ಗಳಷ್ಟು(164 ಲಕ್ಷ ಕೋಟಿ ಡಾಲರ್‌) ಸಾಲ ಮಾಡಿವೆ. ಇದರಲ್ಲಿ ವಿದೇಶಗಳಿಂದ ಪಡೆದ ಸಾಲ, ವಿದೇಶಿ ಬ್ಯಾಂಕುಗಳಿಂದ ಪಡೆದ ಸಾಲ, ಸ್ವದೇಶದಲ್ಲೇ ಮಾಡಿದ ಸಾಲ ಹಾಗೂ ಖಾಸಗಿ ಸಾಲಗಳೂ ಸೇರಿವೆ. ಸಾಲದ ಪ್ರಮಾಣವನ್ನು ದೇಶಗಳು ತಗ್ಗಿಸಿಕೊಳ್ಳದೆ ಇದ್ದರೆ ಮುಂದೆ ಆರ್ಥಿಕ ಹಿಂಜರಿತ ಉಂಟಾದರೆ ಅದನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ದೇಶಗಳೂ ತಮ್ಮ ವಿದೇಶಿ ವಿನಿಮಯ ಮೀಸಲನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದೆ.

ಭಾರತದ ರೀತಿಯ ಅಭಿವೃದ್ಧಿಶೀಲ ಮಧ್ಯಮ ಆದಾಯ ದೇಶಗಳು ಸರಾಸರಿ ತಮ್ಮ ಜಿಡಿಪಿಯ ಶೇ.70ರಷ್ಟುಸಾಲ ಹೊಂದಿವೆ. ಬ್ರೆಜಿಲ್‌ ಶೇ.84ರಷ್ಟು, ಚೀನಾ ಶೇ.47.8ರಷ್ಟುಸಾಲ ಮಾಡಿವೆ. ಚೀನಾದ ಖಾಸಗಿ ಸಾಲವು ಜಾಗತಿಕ ಖಾಸಗಿ ಸಾಲದ ಪ್ರಮಾಣ ಹೆಚ್ಚಲು ದೊಡ್ಡ ಕಾರಣವಾಗಿದೆ. ಅಮೆರಿಕ ಕೂಡ 2020ರ ವೇಳೆಗೆ 1 ಲಕ್ಷ ಕೋಟಿ ಡಾಲರ್‌ನಷ್ಟುಕೊರತೆ ಬಜೆಟ್‌ ಎದುರಿಸಲಿದೆ. ಜಗತ್ತಿನ ಆರ್ಥಿಕತೆ ಮುಂದಿನ ಎರಡು ವರ್ಷಗಳ ಕಾಲ ಸರಾಸರಿ ಶೇ.3.9ರಷ್ಟುಬೆಳೆಯಲಿದೆ ಎಂದು ಐಎಂಎಫ್‌ ಅಂದಾಜಿಸಿದೆ.

loader