Asianet Suvarna News Asianet Suvarna News

ಹೆಚ್‌ಐವಿ ಪೀಡಿತ ಮಕ್ಕಳಿಗೇಕಿಲ್ಲ ಸೂರು?

ಹೆಚ್‌ಐವಿ ಪೀಡಿತ ಮಕ್ಕಳಿಗೇಕಿಲ್ಲ ಸೂರು?

ಬುಡಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೂರು ಕಾಣದಾದ ಮಕ್ಕಳು

ಗುತ್ತಿಗೆದಾರನಿಗೆ ಹಣ ನೀಡಿಲ್ಲ ಎಂದು ಕಟ್ಟಡ ಹಸ್ತಾಂತರ ವಿಳಂಬ 

ಬೆಳಗಾವಿ(ಜೂ.23): ಇಲ್ಲಿರುವ ಪುಟ್ಟ ಕೋಣೆಯಲ್ಲಿ ಸುಮಾರು 43 ಹೆಚ್‌ಐವಿ ಪೀಡಿತ ಮಕ್ಕಳು ವಾಸವಾಗಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಈ ಮನೆಯಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಕೂಡ ಇಲ್ಲ. 

ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಮಹೇಶ್ ಫೌಂಡೇಶನ್ ಕೇರ್‌ನಲ್ಲಿ ಕಳೆದ 6 ವರ್ಷಗಳಿಂದ ಈ ಮಕ್ಕಳು ಬದುಕು ಸವೆಸುತ್ತಿದ್ದಾರೆ. ಆದರೆ ಅಕ್ಕಪಕ್ಕದವರ ಅಸಹಕಾರದಿಂದ ಬೇಸತ್ತ ಮಹೇಶ್ ಫೌಂಡೇಶನ್ ಕೇರ್‌ನವರು ಬುಡಾ ಆಧಿಕಾರಿಗಳಿಗೆ ಮನವಿ ಮಾಡಿ ಬೇರೊಂದು ಮನೆಯನ್ನು ಕಟ್ಟಿಕೊಳ್ಳುವಲ್ಲಿ ಯಶಶ್ವಿಯಾಗಿದ್ದಾರೆ.

ಆದರೆ ಗುತ್ತಿಗೆದಾರನಿಗೆ ಹಣ ನೀಡಿಲ್ಲ ಅನ್ನೋ ಕಾರಣಕ್ಕೆ ಈ ಹೊಸ ಕಟ್ಟಡವನ್ನು ಮಹೇಶ್ ಫೌಂಡೇಶನ್ ಕೇರ್‌ಗೆ ಇನ್ನೂ ಹಸ್ತಾಂತರ ಮಾಡಿಲ್ಲ. ಈ ಕುರಿತು ಸಾಕಷ್ಟು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೆಚ್‌ಐವಿ ಪೀಡಿತ ಮಕ್ಕಳು ಅನುಭವಿಸುತ್ತಿರುವ ನೋವು ಎಂತದ್ದು?. ಈ ವಿಡಿಯೋ ನೊಡಿ..

Video Top Stories