Asianet Suvarna News Asianet Suvarna News

ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ ಬಾಳುವ ಈ ವಯಾಗ್ರಕ್ಕೆ ಸಂಕಷ್ಟ

ಹಿಮಾಲಯನ್ ವಯಾಗ್ರ ಎಂದೇ ಪ್ರಸಿದ್ಧಿಯಾಗಿರುವ ಕ್ಯಾಟರ್ ಪಿಲ್ಲರ್ ಫಂಗಸ್ ಗೆ ಇದೀಗ ಸಂಕಷ್ಟ ಬಂದೊದಗಿದೆ. ಹವಾಮಾನ ಬದಲಾವಣೆಯೇ ಇದು ಅಳಿವಿನಂಚಿಗೆ ಹೋಗಲು ಕಾರಣವಾಗಿದೆ. 

Himalayan Viagra more expensive than gold under threat
Author
Bengaluru, First Published Oct 23, 2018, 1:24 PM IST

ಜಮ್ಮು ಕಾಶ್ಮೀರ : ಕ್ಯಾಟರ್ ಪಿಲ್ಲರ್  ಫಂಗಸ್ ಬಂಗಾರಕ್ಕಿಂತಲೂ ಕೂಡ ದುಬಾರಿಯಾದ ವಸ್ತು. ಇದಕ್ಕೆ ಹಿಮಾಲಯನ್ ವಯಾಗ್ರ ಎಂದೂ ಕೂಡ ಕರೆಯಲಾಗುತ್ತದೆ. 

ಇತ್ತೀಚಿನ ದಿನಗಳಲ್ಲಿ ಅತ್ಯಂತ ದುಬಾರಿಯಾದ ಈ ವಯಾಗ್ರವು ಪತ್ತೆಯಾಗುವುದೇ ಅಪರೂಪವಾಗಿದೆ.  ಹವಾಮಾನ ಬದಲಾವಣೆಯಿಂದ ಈ ವಯಾಗ್ರವು ಇದೀಗ ವಿನಾಶದ ಅಂಚನ್ನು ತಲುಪಿದೆ.  ಆದರೆ ಇದು ಸಾಕಷ್ಟು ಪ್ರಮಾಣದಲ್ಲಿ ನಾಶವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. 

ವಯಾಗ್ರದಂತೆ ಹಾಗೂ ಔಷಧವಾಗಿ ಬಳಕೆಯಾಗುವ ಕ್ಯಾಟರ್ ಪಿಲ್ಲರ್ ಫಂಗಸ್ ನಿಂದ ಅನುಕೂಲವಿದೆ ಎಂದು ಯಾವುದೇ ಸಂಶೋಧನೆಗಳೂ ಕೂಡ ಹೇಳಿಲ್ಲ. ಆದರೂ ಅತ್ಯಂತ ದುಬಾರಿಯಾದ ಇದನ್ನು ಹೆಚ್ಚು ಹಣತೆತ್ತು ಕೊಂಡು ಟೀ ಅಥವಾ ಸೂಪ್ ರೀತಿ ಮಾಡಿ ಕುಡಿಯುತ್ತಾರೆ.  ಇದರಿಂದ ಲೈಂಗಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಹಾಗೂ ಕ್ಯಾನ್ಸರ್ ಗುಣವಾಗುತ್ತದೆ ಎಂದು ನಂಬಲಾಗುತ್ತದೆ. 

ಅತ್ಯಂತ ದುಬಾರಿಯಾದ ಜೈವಿಕ ವಸ್ತುವಾದ ಇದನ್ನು ಸಂಗ್ರಹ ಮಾಡುವ ಕೆಲಸದಲ್ಲಿ ಅನೇಕರು ತೊಡಗಿಸಿಕೊಂಡು ಇದನ್ನೇ ತಮ್ಮ ಆದಾಯದ ಮೂಲವಾಗಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮುಖ್ಯಸ್ಥರು ಹೇಳುತ್ತಾರೆ. ಬಂಗಾರಕ್ಕಿಂತಲೂ ಕೂಡ ಅತ್ಯಧಿಕ ಬೆಲೆಯಲ್ಲಿ ಇದು ಮಾರಾಟವಾಗುತ್ತದೆ. 

Follow Us:
Download App:
  • android
  • ios