ಇವರು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ತಮಾಷೆಗಾಗಿಯಂತೆ

First Published 10, Jan 2018, 4:10 PM IST
Highway horror Kidnapped raped girl for fun say accused
Highlights

ಅತ್ಯಾಚಾರವನ್ನು ಉದ್ದೇಶಪೂರ್ವಕವಾಗಿ ಎಸಗದೆ ತಮಾಷೆಗಾಗಿ ಮಾಡಿರುವುದಾಗಿ ಹೇಳಿದ್ದು, ಅತ್ಯಾಚಾರ ಎಸಗಿರುವ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಮೀರತ್(ಜ.10): ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ತಮಾಷೆಗಾಗಿ ಎಂದು ಆರೋಪಿಗಳಿಬ್ಬರು ಹೇಳಿಕೆ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಮೀರತ್'ನಲ್ಲಿ ನಡೆದಿದೆ.   

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 91ರಲ್ಲಿ ಇದೇ ಜನವರಿ 2 ರಂದು ಮೂವರು ಕಾಮುಕರು 16 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದಿದ್ದರು. ಕೆಲವು ದಿನಗಳ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಹೇಳಿಕೆ ಪಡೆದಾಗ ತಾವು ಅತ್ಯಾಚಾರ,ಕೊಲೆ ಮಾಡಿದ್ದು ತಮಾಷೆಗಾಗಿ ಎಂದು ಹೇಳಿಕೆ ನೀಡಿದ್ದಾರೆ.

ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ 20ರ ಹರೆಯದ ಆರೋಪಿಗಳು' ಮೂರು ಮಂದಿ ಸಿನಿಮಾ ನೋಡಿ ಮದ್ಯಪಾನ ಮಾಡಿದ ನಂತರ ತಮಾಷೆಗಾಗಿ ಹೆದ್ದಾರಿ ಸಮೀಪ ಟ್ಯೂಷನ್'ನಿಂದ ಮನೆಗೆ ಹಿಂತಿರುಗುತ್ತಿದ್ದ ಬಾಲಕಿಯೊಬ್ಬಳನ್ನು ಕಂಡು ವಾಹನದ ಮೂಲಕ ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆಮಾಡಿದೆವು. ನಂತರ ಗ್ರಾಮದ ಸಮೀಪ ಬಾಲಕಿಯ ದೇಹವನ್ನು ಕಾಲುವೆಗೆ ಎಸೆದವು' ಎಂದು ಆರೋಪಿಗಳು ತಿಳಿಸಿದರು.

ಅತ್ಯಾಚಾರವನ್ನು ಉದ್ದೇಶಪೂರ್ವಕವಾಗಿ ಎಸಗದೆ ತಮಾಷೆಗಾಗಿ ಮಾಡಿರುವುದಾಗಿ ಹೇಳಿದ್ದು, ಅತ್ಯಾಚಾರ ಎಸಗಿರುವ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

loader