Asianet Suvarna News Asianet Suvarna News

2 ದಿನಗಳ ಜಿ-20 ಶೃಂಗಕ್ಕೆ ಚಾಲನೆ

ಎರಡು ದಿನಗಳ ಜಿ-20 ರಾಷ್ಟ್ರಗಳ ಶೃಂಗಕ್ಕೆ ಅರ್ಜೆಂಟೀನಾದಲ್ಲಿ ಚಾಲನೆ | ಜಿ-20 ಶೃಂಗದಲ್ಲಿ ಭಾಗಿಯಾಗಲು ಆಗಮಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಶೃಂಗ ಆರಂಭಕ್ಕೂ ಮುನ್ನ ಬ್ರಿಕ್ಸ್‌ ದೇಶಗಳ ಮುಖ್ಯಸ್ಥರ ಜೊತೆ ಪ್ರತ್ಯೇಕ ಸಭೆ ನಡೆಸಿದರು.

Highligts of G -20 summit in Argentina
Author
Bengaluru, First Published Dec 1, 2018, 9:03 AM IST

ಬ್ಯೂನಸ್‌ ಐರಿಸ್‌ (ಡಿ. 01): ಎರಡು ದಿನಗಳ ಜಿ-20 ರಾಷ್ಟ್ರಗಳ ಶೃಂಗಕ್ಕೆ ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಶುಕ್ರವಾರ ಚಾಲನೆ ಸಿಕ್ಕಿತ್ತು. 10 ವರ್ಷಗಳ ಶೃಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅತ್ಯಂತ ಕ್ಷಿಷ್ಟಸನ್ನಿವೇಶದಲ್ಲಿ ವಿವಿಧ ದೇಶಗಳ ನಾಯಕರು ಒಂದೆಡೆ ಸೇರಿದ್ದಾರೆ.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಸದಸ್ಯ ರಾಷ್ಟ್ರಗಳು ಬಹಿರಂಗವಾಗಿಯೇ ಪರಸ್ಪರ ಸಮರ ನಡೆಸುತ್ತಿದ್ದು, ಇಂಥ ವೇಳೆಯೇ ಶೃಂಗ ಆಯೋಜನೆಗೊಂಡಿದೆ. ಹೀಗಾಗಿ ಸಮಾವೇಶದ ಎರಡನೇ ದಿನವಾದ ಶನಿವಾರ ಗೊತ್ತುವಳಿ ಈಡೇರಿಸುವ ವಿಷಯದಲ್ಲಿ ಒಮ್ಮತ ಮೂಡಿಸಲು ರಾಜತಾಂತ್ರಿಕರು ಹರಸಾಹಸ ಪಡುತ್ತಿದ್ದಾರೆ.

ಒಂದು ವೇಳೆ ಒಮ್ಮತ ಮೂಡದೇ ಇದ್ದಲ್ಲಿ, ಯಾವುದೇ ಗೊತ್ತುವಳಿ ಅಂಗೀಕರಿಸದೇ ಇರುವ ಅಥವಾ ಯುರೋಪಿಯನ್‌ ಒಕ್ಕೂಟದ ದೇಶಗಳು ಪ್ರತ್ಯೇಕ ಗೊತ್ತುವಳಿ ಅಂಗೀಕರಿಸಿ ಐತಿಹಾಸಿಕ ಕ್ಷಣಗಳಿಗೆ ಕಾರಣವಾಗುವ ಸಾಧ್ಯತೆಗಳು ಇಲ್ಲದಿಲ್ಲ ಎನ್ನಲಾಗಿದೆ.

ಮೋದಿ ಭೇಟಿ:

ಜಿ-20 ಶೃಂಗದಲ್ಲಿ ಭಾಗಿಯಾಗಲು ಆಗಮಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಶೃಂಗ ಆರಂಭಕ್ಕೂ ಮುನ್ನ ಬ್ರಿಕ್ಸ್‌ ದೇಶಗಳ ಮುಖ್ಯಸ್ಥರ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಜೊತೆಗೆ ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೇರಿ ಹಲವು ದೇಶಗಳ ಗಣ್ಯರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. 

 

Follow Us:
Download App:
  • android
  • ios