ನವದೆಹಲಿ[ಫೆ.07] ಗುರುವಾರದ ಸಂಜೆ ಮೋದಿ ಮಯ. ಸಂಸತ್‌ನಲ್ಲಿ ನರೇಂದ್ರ ಮೋದಿ ತಮ್ಮ ನೇತೃತ್ವದ ಈ ಸರ್ಕಾರದ ಕೊನೆಯ ಭಾಷಣ  ಮಾಡಿದ್ದಾರೆ. ಅಬ್ಬರಿಸಿದ ನರೇಂದ್ರ ಮೋದಿ ಒಂದು ಗಂಟೆಗೂ ಅಧಿಕ ಕಾಲ ಮಾತನಾಡಿದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು 2014 ರ ನಂತರ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆದ ಬದಲಾವಣೆಗಳು ಏನೇನು ಎಂಬುದನ್ನು ಹೇಳುತ್ತಲೇ ಹೋದರು. ಅಲ್ಲಲ್ಲಿ ಕಾಂಗ್ರೆಸ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಹಾಘಟಬಂಧನ್, ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ತಮ್ಮ ರಾಜಕಾರಣದ ವಿರೋಧಿಗಳಿಗೆ ಮಾತಿನ ಬಿಸಿ ಮುಟ್ಟಿಸಿದರು.

ರೈತರಿಗೆ ಮೋದಿ ಕೊಟ್ಟ ಬಂಪರ್

ಮೇಕ್  ಇನ್ ಇಂಡಿಯಾ, ಸ್ವಚ್ಛ ಭಾರತ ನಿರ್ಮಾಣ, ಬಡವರಿಗೆ ಮನೆ, ವಿದ್ಯುತ್ ಶಕ್ತಿ ಸೌಲಭ್ಯ, ಯುವಕರಿಗೆ ನೀಡಿದ ಕೊಡುಗೆ ಎಲ್ಲವನ್ನು ಒಂದೊಂದಾಗಿ ತೆರೆದಿಟ್ಟರು. ದ ಮೊದ ಮೊದಲು ವಿರೋಧಿಗಳು ಗದ್ದಲ ಮಾಡಲು ಯತ್ನಿಸಿದರಾದರೂ ಆಮೇಲೆ ತಣ್ಣಗಾದರು.

"

ಭಾಷಣದ ಮುಖ್ಯಾಂಶಗಳು:
* ಅಹಂಕಾರದ ಪರಿಣಾಮವೇ 400ರಲ್ಲಿದ್ದ ಕಾಂಗ್ರೆಸ್ 40 ಸ್ಥಾನಕ್ಕೆ ಇಳಿದಿದೆ.
*  ಕುಂಭಮೇಳದಲ್ಲಿ ವಿಶ್ವದ ಹಲವು ದೇಶಗಳ ಪ್ರತಿನಿಧಿಗಳಿರುವುದು ಹೆಮ್ಮೆ
* ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಳೈಸುತ್ತಿದೆ ಭಾರತದ ನಿವಾಸಿಗಳ ಸಾಧನೆ 
*  ದೇವೇಗೌಡ ಬಗ್ಗೆ ಪ್ರಸ್ತಾಪಿಸಿದ ಮೋದಿ 52 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ರಾ ಹೇಳಿ..? ಎಂದು ಪ್ರಶ್ನೆ ಮಾಡಿದರು.
* 6 ಸಾವಿರ ಕೋಟಿ ರೂಪಾಯಿವರೆಗೆ ಸಾಲ ಮನ್ನಾ ಮಾಡಿದ್ದೇ ಸಾಧನೆ.. ಕರ್ನಾಟಕದ ಮೈತ್ರಿ ಸರ್ಕಾರದ ಸಾಲ ಮನ್ನಾ ವಿಚಾರ ಲೇವಡಿ
*  ನೆಹರು ಅಡಿಗಲ್ಲು ಹಾಕಿದ್ದ ರೈತ ಯೋಜನೆ ಈಗ ಜಾರಿಗೊಳಿಸಿದ್ದು ನಾವು
*  55 ವರ್ಷದ ಕಾಂಗ್ರೆಸ್ ಆಡಳಿತದ ವಿರುದ್ಧ ನನ್ನ 55 ತಿಂಗಳ ಆಡಳಿತ ನೋಡಿ
* ಶಿಕ್ಷಣ-ಉದ್ಯೋಗದಲ್ಲಿ ಆರ್ಥಿಕ ಹಿಂದುಳಿದ ಮೇಲ್ಜಾತಿಗೆ ಮೀಸಲಾತಿ ನೀಡಿದ್ದೇವೆ
*  LED ಬಲ್ಬ್ ವಿತರಣೆ ಮಾಡಿದ್ದರಿಂದ ದೇಶದಲ್ಲಿ 50 ಕೋಟಿ ಉಳಿತಾಯವಾಗಿದೆ
* ದೇಶದ ಬೆಲೆ ಏರಿಕೆಗೆ ಕಾರಣ ಇದೇ ಕಾಂಗ್ರೆಸ್ ಪಕ್ಷದ ದುರಾಡಳಿತ
* ದೇಶದ ಸಂಸ್ಥೆಗಳಿಗೆ ಕಾಂಗ್ರೆಸ್ ಅಪಮಾನ ಮಾಡಿದೆ.
*  ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಖಡಕ್ ಸಮರ ಸಾರಿದ್ದು ನಾವು
* ದುರುದ್ದೇಶದಿಂದಲೇ ರಫೇಲ್ ಒಪ್ಪಂದ ಸ್ಕ್ರ್ಯಾಪ್ ಮಾಡಲು ಕಾಂಗ್ರೆಸ್
* ನಮ್ಮ ವಾಯುಸೇನೆಯನ್ನು ಬಲಪಡಿಸಬೇಕೆಂಬ ಯೋಚನೆಯೇ ಕಾಂಗ್ರೆಸ್‌ಗೆ ಬಂದಿರಲಿಲ್ಲ
* ಸರ್ಜಿಕಲ್ ಸ್ಟ್ರೈಕ್ ವಿಷಯದಲ್ಲೂ ಕಾಂಗ್ರೆಸ್ ನಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದೆ
*  ಅಧಿಕಾರದಾಹಿ ಕಾಂಗ್ರೆಸ್ 18 ಕೋಟಿ ಸಾಲವನ್ನು 52 ಲಕ್ಷ ಕೋಟಿಗೆ ಏರಿಸಿತ್ತು.
* ನೀವು ಉಳಿಸಿ ಹೋದ ಸಾಲದ ಬಡ್ಡಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ
* ಲೂಟಿ ಹೊಡೆಯುವವರಿಗೆ ಲೂಟಿ ಮಾಡಲು ಅವಕಾಶ ಕೊಟ್ಟಿರಿ
* ಮಹಾಘಟಬಂದನ್ ಕಥೆ ಮುಂದಾನಾಗುತ್ತೇ ಕಾದು ನೋಡಿ
* ಮಹಾಘಟಬಂದನ್ ಅನ್ನು ಮಹಾ ಮಿಲಾವತ್ ಎಂದು ಕರೆದ ಮೋದಿ

"