Asianet Suvarna News Asianet Suvarna News

ಕೇರಳದ ನೋವಿಗೆ ಸ್ಪಂದಿಸಿದವರಿಗೆ ಕೊಡಗಿನ ಕೂಗು ಕೇಳುವುದೆ?

ಕಳೆದ ನಾಲ್ಕಾರು ದಿನಗಳಿಂದ ರಾಜ್ಯಾದ್ಯಂತ ಅಬ್ಬಿರಿಸುತ್ತಿರುವ ಧಾರಾಕಾರ ಮಳೆ, ಮಳೆಯಿಂದ ಮುಳುಗಡೆಯಾದ ಸೇತುವೆಗಳು, ಕುಸಿದು ಬಿದ್ದ ಗುಡ್ಡ, ಮನೆ ಕಳೆದುಕೊಂಡ ಸಂತ್ರಸ್ಥರ ಗೋಳು.. ಎಲ್ಲವನ್ನು ನೋಡುತ್ತಲೇ ಇದ್ದೀರಿ. ಪಕ್ಕದ ಕೇರಳದಲ್ಲಿ ಮೇಘಸ್ಫೋಟಕ್ಕೆ ಜನ ತತ್ತರಿಸಿ ಹೋದಾಗ ನಾವು ಸ್ಪಂದಿಸಿದ್ದೇವು. ಆದರೆ ನಮ್ಮದೇ ರಾಜ್ಯದ ಕೊಡಗಿನ ಬಗ್ಗೆ... ಅಲ್ಲಿಯ ಜನರ ಸಂಕಷ್ಟಗಳ ಬಗ್ಗೆ... 

Heavy rains lash Kodagu, landslides in hilly areas
Author
Bengaluru, First Published Aug 14, 2018, 7:31 PM IST

ಮಡಿಕೇರಿ[ಆ.14] ಕೊಡಗಿನಲ್ಲಿ ಸಂಚಾರ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.  ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿಯೂ ಮಳೆ ಅಬ್ಬರಿಸುತ್ತಿದೆ. 

ಕಾಫಿ ತೋಟಗಳ ಪರಿಸ್ಥಿತಿಯನ್ನು ಹೇಳಲೂ ಸಾಧ್ಯವೇ ಇಲ್ಲ. ಕೊಡಗಿನ ಬೇತ್ರಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಸುರಕ್ಷಿತ ಪ್ರದೇಶಕ್ಕೆ ತೆರಳಲು ಜನರಿಗೆ ಸೂಚನೆ ನೀಡಲಾಗಿದೆ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳ ಸ್ಥಿತಿಯಂತೂ ಬೇಡವೇ ಬೇಡ. ಜಿಲ್ಲೆಯ ಎಲ್ಲ ನದಿಗಳಲ್ಲೂ ಪ್ರವಾಹ..

ರಾಜ್ಯದೆಲ್ಲೆಡೆ ಮಳೆ ಅಬ್ಬರ ಹೇಗಿತ್ತು? ಹೇಗಿದೆ ನಿಮ್ಮೂರಿನ ಫೋಟೋವೂ ಇರಬಹುದು

ಸಾಮಾಜಿಕ ತಾಣದಲ್ಲಿಯೂ ಕೊಡಗಿನ ಸಂಕಷ್ಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿಂದೆ ಬಾಲಕನೊಬ್ಬ ಕೊಡಗಿನ ಸಂಕಷ್ಟಗಳ ಕುರಿತಾಗಿ ಮಾತನಾಡಿದ್ದ ವಿಡಿಯೋ ಸಹವೈರಲ್ ಆಗಿತ್ತು. ಸಿಎಂ ಕುಮಾರಸ್ವಾಮಿ ಸಹ ನಂತರ ಬಾಲಕನನ್ನು ಭೇಟಿ ಮಾಡಿದ್ದರು. ಇದೀಗ ಕನ್ನಡಿಗರು ಕೊಡಗಿನ ನೆರವಿಗೆ ಧಾವಿಸಬೇಕಾದ ಸ್ಥಿತಿಯೂ ಎದುರಾಗಿದೆ. 

 

Follow Us:
Download App:
  • android
  • ios