ವಿಲ್ಲಿಂಗ್ ಟನ್ :  ಉತ್ತರ ಕೆರೆಲಿನಾದ ವಿಲ್ಲಿಂಗ್ ಟನ್ ಪ್ರದೇಶಕ್ಕೆ ಭಾರೀ ಚಂಡ ಮಾರುತ ಅಪ್ಪಳಿಸಿದ್ದು ಇದರಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.  ವಿವಿದ ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ವಿದ್ಯುತ್ ಸ್ಥಗಿತವಾಗಿದೆ. 

ಹಲವು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದ್ದು ಇದರಿಂದ ಲಕ್ಷಾಂತರ ಜನರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೇ  ಶುಕ್ರವಾರವೂ ಕೂಡ ಚಂಡಮಾರುತದ ಅಪ್ಪಳಿಸಲಿದೆ ಎಂದು ಇಲ್ಲಿನ ಚಂಡಮಾರುತ ಮುನ್ನೆಚ್ಚರಿಕಾ ಕೇಂದ್ರವು ಎಚ್ಚರಿಕೆ ನೀಡಿದೆ. ಚಂಡ ಮಾರುತದಿಂದ ಹಲವು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯು ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದೆ. 

ಸಂಪೂರ್ಣ ಉತ್ತರ ಕೆರೆಲಿನಾ ರಾಜ್ಯವೇ ಪ್ರವಾಹದಿಂದ ತತ್ತರಿಸುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ರಕ್ಷಣಾ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಗವರ್ನರ್ ರಾಯ್ ಕೂಪರ್ ಹೇಳಿದ್ದಾರೆ. 

ಈಗಾಗಕಲೇ ನಾರ್ಥ್ ಕೆರೆಲಿನಾದಲ್ಲಿ ಅಪ್ಪಳಿಸಿದ ಚಂಡಮಾರುತ ವಿವಿಧ ರೀತಿಯ ಹಾನಿಯನ್ನು ಉಂಟು ಮಾಡಿದೆ. ವಿದ್ಯುತ್ ಸ್ಥಗಿತವಾಗಿದೆ. ಜನರು ಮನೆಯಿಂದ ಹೊರಕ್ಕೆ ಬರಲಾಗದ ಸ್ಥಿತಿ ಎದುರಿಸುತ್ತಿದ್ದಾರೆ. ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಒಟ್ಟಿನಲ್ಲಿ ಚಂಡಮಾರುತ ಹಾಗೂ ಭಾರೀ ಮಳೆಯಿಂದ ಜನಜೀವನ ತತ್ತರಿಸಿದೆ.