ನವದೆಹಲಿ[ಜ.04]: ಬಹುನಿರೀಕ್ಷಿತ ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ವಿಚಾರಣೆ ಶುಕ್ರವಾರ ನಡೆಯಲಿದೆ.

ರಾಮಮಂದಿರ ಬಗ್ಗೆ ಮೊದಲ ಬಾರಿ ಮೋದಿ ಮಾತು; ಏನಂದ್ರು ಪ್ರಧಾನಿ?

ಇಂದು ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೋಯ್‌ ಹಾಗೂ ನ್ಯಾ ಸಂಜಯ್‌ ಕಿಶನ್‌ ಕೌಲ್‌ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಪೂರ್ಣ ಪ್ರಮಾಣದ ವಿಚಾರಣೆಗೆ ಈ ಪೀಠವು ತ್ರಿಸದಸ್ಯ ಪೀಠ ರಚಿಸುವ ನಿರೀಕ್ಷೆಯಿದೆ. ಈ ಹಿಂದೆ ಅ.29ರಂದು ನಡೆದ ವಿಚಾರಣೆ ವೇಳೆ, ‘ಅಯೋಧ್ಯೆ ವಿಚಾರಣೆಗೆ ಆತುರವಿಲ್ಲ. ಜನವರಿಯಲ್ಲಿ ಪೀಠ ರಚಿಸಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಅಯೋಧ್ಯ ವಿವಾದ: ಜ.4 ಕ್ಕೆ ವಿಚಾರಣೆ

2010ರಲ್ಲಿ ಅಲಹಾಬಾದ್‌ ಹೈಕೋರ್ಟು ಅಯೋಧ್ಯೆಯ ವಿವಾದಿತ ಜಮೀನನ್ನು ನಿರ್ಮೋಹಿ ಅಖಾಡಾ, ರಾಮಲಲ್ಲಾ ಹಾಗೂ ಸುನ್ನಿ ವಕ್ಫ್ ಮಂಡಳಿ ನಡುವೆ ಹಂಚಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು.