Asianet Suvarna News Asianet Suvarna News

ಹೈ ವೋಲ್ಟೇಜ್ ಕ್ಷೇತ್ರವಾಗಿದೆ ಚಾಮುಂಡೇಶ್ಚರಿ: ಸಿಎಂ, ಎಚ್’ಡಿಕೆ ಭರ್ಜರಿ ಪ್ರಚಾರ: ಯಾರಿಗೆ ಒಲಿಯುತ್ತಾನೆ ಮತದಾರ?

ಹೈ ವೋಲ್ಟೇಜ್ ಕ್ಷೇತ್ರ ಚಾಮುಂಡೇಶ್ಚರಿ  ಹಾಲಿ,ಮಾಜಿ ಸಿಎಂಗಳಿಗೆ ಪ್ರತಿಷ್ಟೆಯ ಕಣವಾಗಿದೆ. 

HDK and CM Siddaramaiah Campaign in Chamundeshvari

ಮೈಸೂರು (ಏ. 13):  ಹೈ ವೋಲ್ಟೇಜ್ ಕ್ಷೇತ್ರ ಚಾಮುಂಡೇಶ್ಚರಿ  ಹಾಲಿ,ಮಾಜಿ ಸಿಎಂಗಳಿಗೆ ಪ್ರತಿಷ್ಟೆಯ ಕಣವಾಗಿದೆ. 

ಸಿಎಂ ಸಿದ್ದರಾಮಯ್ಯ  ಏ. 16 ರಿಂದ 2 ದಿನಗಳ ಕಾಲ ಮೈಸೂರಿನಲ್ಲಿ  ಟಿಕಾಣಿ ಹೂಡಲಿದ್ದಾರೆ.  ಸಿಎಂ ಬರೋ ಮುನ್ನವೇ  ನಾಳೆಯಿಂದ  ಮೂರುದಿನಗಳ ಕಾಲ ಮಾಜಿ ಸಿಎಂ ಕುಮಾರಸ್ವಾಮಿ ಚಾಮುಂಡೇಶ್ಚರಿಯಲ್ಲಿ ಭರ್ಜರಿ ಪ್ರಚಾರ ಮಾಡಲಿದ್ದಾರೆ. 

ಸಿಎಂ ಸಿದ್ದರಾಮಯ್ಯ  ಕ್ಷೇತ್ರದ 32 ಹಳ್ಳಿಗಳಲ್ಲಿ ಭರ್ಜರಿ ರೌಡ್ಸ್ ಹೊಡೆಯಲಿದ್ದಾರೆ.  ಚಾಮುಂಡೇಶ್ಚರಿ ಕ್ಷೇತ್ರ ವ್ಯಾಪ್ತಿಯ ಲಿಂಗಾಬುದ್ದಿಪಾಳ್ಯ, ಶ್ರೀರಾಂಪುರ,ಪರಸಯ್ಯನಹುಂಡಿ,ರಮಾಬಾಯಿ ನಗರ ಸೇರಿದಂತೆ ಮೊದಲ ದಿನ 16 ಗ್ರಾಮಗಳಿಗೆ ಭೇಟಿ ನೀಡಿದರೆ  18 ಕ್ಕೆ ಜಟ್ಟಿಹುಂಡಿ,ಗೋಹಳ್ಳಿ,ಕೊಮಾರಬೀಡು, ಬೀರಿಹುಂಡಿ, ಸೇರಿ ಹಲವು ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. 

ಸಿಎಂ ಕ್ಷೇತ್ರಕ್ಕೆ ಬರೋ ಮುನ್ನವೇ ಮಾಜಿ ಸಿಎಂ ಕುಮಾರಸ್ವಾಮಿ ಎಂಟ್ರಿ ಕೊಡಲಿದ್ದಾರೆ.  ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಇದೇ ಮೊದಲಬಾರಿಗೆ ಕುಮಾರಸ್ವಾಮಿ ರೌಂಡ್ಸ್ ಹಾಕಲಿದ್ದಾರೆ.  ನಾಳೆ ಮೈಸೂರಿಗೆ ಕುಮಾರಸ್ವಾಮಿ ಆಗಮಿಸಲಿದ್ದಾರೆ.  ಮೊದಲ ದಿನ ಹಿನಕಲ್,ಕೋಟೆಹುಂಡಿ,ಡಿ.ಸಾಲುಂಡಿ, ದಾರಿಪುರ ಸೇರಿ 27 ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ.  15 ಕ್ಕೆ ಲಿಂಗಾಬುದ್ದಿ ಪಾಳ್ಯ, ತಳೂರು,ಬೋಗಾದಿ,ಉದ್ಬೂರು ಸೇರಿ 33 ಗ್ರಾಮಗಳಲ್ಲಿ ಸುತ್ತು ಹಾಕಲಿದ್ದಾರೆ.  16 ಕ್ಕೆ ರಟ್ಟನಹಳ್ಳಿ, ಇಲವಾಲ,ಹುಯಿಲಾಳು,ಕಮರಹಳ್ಳಿ,ಸಾಹುಕಾರಹುಂಡಿ ಸೇರಿ 38 ಹಳ್ಳಿಯಲ್ಲಿ ಕುಮಾರ ಸ್ವಾಮಿ ಪ್ರಚಾರ ಕೈಗೊಳ್ಳಲಿದ್ದಾರೆ. 

ಕಳೆದ ಬಾರಿ ಸಿಎಂ ಭೇಟಿ ನೀಡಿದ್ದ ಗ್ರಾಮಗಳಿಗೆ ಕುಮಾರಸ್ವಾಮಿ ತಪ್ಪದೆ ಭೇಟಿ ನೀಡಲಿದ್ದಾರೆ. 
 

Follow Us:
Download App:
  • android
  • ios