ಬೆಂಗಳೂರು[ಸೆ.16] ಆಪರೇಶನ್ ಕಮಲದ ವಿಚಾರವನ್ನು ಕಮಲ ಪಾಳಯದ ನಾಯಕರೊಬ್ಬರೆ ಕುಮಾರಸ್ವಾಮಿಗೆ ತಿಳಿಸಿದ್ದರು ಎನ್ನಲಾಗುತ್ತಿದೆ. ಹೌದು ಕುಮಾರಸ್ವಾಮಿಗೆ ಆಪ್ತರಾಗಿರುವ ಬಿಜೆಪಿ ನಾಯಕ ಒಕ್ಕಲಿಗ ಸಮುದಾಯದ ಪ್ರಮುಖ ಮುಖಂಡ  ಮಾಜಿ ಡಿಸಿಎಂ ಅವರೇ ಕುಮಾರಸ್ವಾಮಿಗೆ ಮಾಹಿತಿ ನೀಡಿದ್ದು!

ಹೌದು ಹೆಸರನ್ನು ನೀವು ಊಹಿಸಬಹುದು. ಮಾಜಿ ಡಿಸಿಎಂ ಆರ್. ಅಶೋಕ್ ಕುಮಾರಸ್ವಾಮಿಗೆ ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯಲಿದ್ದು, ಮೈತ್ರಿ ಸರಕಾರಕ್ಕೆ ಮುಳುವಾಗುತ್ತದೆ ಎಂಬ ಮಾಹಿತಿ ನೀಡಿದರು ಎನ್ನಲಾಗಿದೆ.

ಇದಕ್ಕೆ ಕಾರಣಗಳು ಇವೆ. ಬಿಎಸ್ ಯಡಿಯೂರಪ್ಪ ಆಪರೇಶನ್ ಹೊಣೆಯನ್ನು ಇನ್ನೊಬ್ಬ ಒಕ್ಕಲಿಗ ಮುಖಂಡ ಸಿ.ಪಿ.ಯೋಗೇಶ್ವರ ಅವರಿಗೆ ನೀಡಿದ್ದರು. ಒಂದು ವೇಳೆ ಆಪರೇಶನ್ ಸಕ್ಸಸ್ ಆದರೆ ಯೋಗೇಶ್ವರ ಬಿಜೆಪಿಯಲ್ಲಿ ಪ್ರಮುಖ ಒಕ್ಕಲಿಗ ನಾಯಕರಾಗಿ ಬೆಳೆಯಬಹುದು ಎಂಬ ಆತಂಕ ಅಶೋಕ್ ಅವರಿಗೆ ಎದುರಾಗಿದೆ.

"