Asianet Suvarna News Asianet Suvarna News

ಗೌಡರ 6 ಸಲಹೆಗೆ ಮೋದಿ ಸಮ್ಮತಿ, ಚೀನಾಗೆ ಕೊರೋನಾ ತಂದ ಭೀತಿ; ಮೇ.24ರ ಟಾಪ್ 10 ಸುದ್ದಿ!

6 ಸಲಹೆಯನ್ನು ಪ್ರಧಾನಿ ಮೋದಿ ಸ್ವೀಕರಿಸಿದರೂ ಕೆಲ ವಿಚಾರಗಳಲ್ಲಿ ಅಸಮಾಧಾನವಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಇತ್ತ ವುಹಾನ್ ಲ್ಯಾಬ್‌ನಿಂದ ಕೊರೋನಾ ಸ್ಫೋಟಗೊಂಡಿದೆ ಅನ್ನೋದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಕೊರೋನಾ ಹೋರಾಟಕ್ಕೆ ಬಿಸಿಸಿಐ ನೆರವು ನೀಡಿದೆ. ಸಲಾರ್ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ, ಸೂರ್ಯನ ಸುತ್ತ ಬಣ್ಣದುಂಗುರ ಸೇರಿದಂತೆ ಮೇ. 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

HD devegowda suggestion to China coronavirus top 10 News of May 24 ckm
Author
Bengaluru, First Published May 24, 2021, 4:38 PM IST

ಪ್ರಧಾನಿ ನನ್ನ 6 ಸಲಹೆ ಸ್ವೀಕರಿಸಿದ್ದಾರೆ : ಮೋದಿ ಬಗ್ಗೆ ಎಚ್‌ಡಿಡಿ ಅಸಮಾಧಾನ...

HD devegowda suggestion to China coronavirus top 10 News of May 24 ckm

ಕೋವಿಡ್ ಮಹಾಮಾರಿ ಪ್ರಪಂಚವನ್ನು ಕಾಡುತ್ತಿದೆ.  ಕೆಲವು ರಾಜ್ಯಗಳಲ್ಲಿ ನಿರೀಕ್ಷೆ ಮೀರಿ ಪ್ರಕರಣ ಹೆಚ್ಚಾಗಿದೆ ಎಂದು ಮಾಜಿ PM ಎಚ್.ಡಿ .ದೇವೇಗೌಡ  ಅತಂಕ ವ್ಯಕ್ತಪಡಿಸಿದರು.

ಚೀನಾ ಲ್ಯಾಬ್‌ನಿಂದ ಕೊರೋನ ಸ್ಫೋಟ; ಸಂಶೋಧಕರು ಆಸ್ಪತ್ರೆ ದಾಖಲಾಗಿದ್ದ ಮಾಹಿತಿ ಬಹಿರಂಗ! ...

HD devegowda suggestion to China coronavirus top 10 News of May 24 ckm

ಮಾರಣಾಂತಿಕ ಕೊರೋನಾ ವೈರಸ್ ಮೂಲ ಚೀನಾ ಅನ್ನೋ ಆರೋಪಗಳನ್ನು ಡ್ರ್ಯಾಗನ್ ರಾಷ್ಟ್ರ ನಿರಾಕರಿಸಿದೆ. ಆದರೆ ಹಲವು ದಾಖಲೆಗಳು ಇದು ಚೀನಾದಿಂದ ಆಗಮಿಸಿದ ವೈರಸ್ ಅನ್ನೋದನ್ನು ಪುಷ್ಠೀಕರಿಸುತ್ತದೆ. ಇದೀಗ ಮತ್ತೊಂದು ದಾಖಲೆ ಲಭ್ಯವಾಗಿದೆ.

ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್: ಯಾವ ಲಸಿಕೆ ಉತ್ತಮ?...

HD devegowda suggestion to China coronavirus top 10 News of May 24 ckm

ರಡು ದೇಶೀ ಲಸಿಕೆಗಳು ಹಾಗೂ ರಷ್ಯಾದ ಲಸಿಕೆ ಜನರಿಗೆ ಲಭ್ಯವಾಗಲಿದೆ. ಆದರೀಗ ಸದ್ಯ ಈ ಮೂರೂ ಲಸಿಕೆಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ. ಹೀಗಿರುವಾಗ ಈ ಮೂರು ಲಸಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಒಂದು ವಿವರ

ಮಕ್ಕಳ ರಕ್ಷಿಸಲು ಚಿಕ್ಕ ಮಕ್ಕಳಿರುವ ಪೋಷಕರಿಗೆ ಬೇಗ ಲಸಿಕೆ!...

HD devegowda suggestion to China coronavirus top 10 News of May 24 ckm

ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂಬ ಮುನ್ಸೂಚನೆಗಳ ಬೆನ್ನಲ್ಲೇ, 10 ವರ್ಷದೊಳಗಿನ ಮಕ್ಕಳ ಪೋಷಕರನ್ನು ಗುರುತಿಸಿ ಅವರಿಗೆ ಲಸಿಕೆ ನೀಡಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಹೀಗೆ ಮಾಡುವುದರಿಂದ ಪ್ರತಿ ಕುಟುಂಬಕ್ಕೂ ಕೋವಿಡ್‌ನಿಂದ ರಕ್ಷಣೆ ಸಿಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಿಳಿಸಿದ್ದಾರೆ.

ಕೋವಿಡ್‌ ವಿರುದ್ದದ ಸಮರಕ್ಕೆ 2000 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಒದಗಿಸಿದ ಬಿಸಿಸಿಐ ...

HD devegowda suggestion to China coronavirus top 10 News of May 24 ckm

ಇಡೀ ದೇಶವೇ ಕೋವಿಡ್ ಎರಡನೇ ಅಲೆಯ ವಿರುದ್ದ ಹೋರಾಟ ನಡೆಸುತ್ತಿದೆ, ಇಂತಹ ಸಂಕಷ್ಟದ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದೇಶದ ನೆರವಿಗೆ ಧಾವಿಸಿದೆ. ಇದೀಗ ಬಿಸಿಸಿಐ ಬರೋಬ್ಬರಿ 2 ಸಾವಿರ 10 ಲೀಟರ್‌ನ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳನ್ನು ಒದಗಿಸಿದೆ.

ಸಲಾರ್ ಚಿತ್ರದಲ್ಲಿ ಜ್ಯೋತಿಕಾ ಅಲ್ಲ ಪ್ರಿಯಾಂಕಾ ಉಪೇಂದ್ರ? ...

HD devegowda suggestion to China coronavirus top 10 News of May 24 ckm

ಸಲಾರ್ ಚಿತ್ರದಲ್ಲಿ ಜ್ಯೋತಿಕಾ ಅಭಿನಯಿಸುತ್ತಿದ್ದಾರೆ ಎಂಬುದಾಗಿ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿತ್ತು. ಕೆಲವು ಮೂಲಗಳಿಂದ ಇದರ ಬಗ್ಗೆ ಕ್ಲಾರಿಟಿ ಸಿಕ್ಕಿದೆ.....

AI ಆಧಾರಿತ ಫೀಚರ್‌ ಇರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ಲಾಂಚ್...

HD devegowda suggestion to China coronavirus top 10 News of May 24 ckm

ಭಾರತದಲ್ಲೂ ವ್ಯಾಪಕ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿರುವ ಒಪ್ಪೋ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕೃತಕ ಬುದ್ಧಿಮತ್ತೆ(ಎಐ) ಆಧರಿತ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದೆ.

ಸೂರ್ಯನ ಸುತ್ತ ಬಣ್ಣದುಂಗುರ: ಆಕಾಶದತ್ತ ಬೆಂಗಳೂರಿಗರ ಕಣ್ಣು: ಪೋಟೋಸ್‌ ವೈರಲ್...

HD devegowda suggestion to China coronavirus top 10 News of May 24 ckm

ಕಳೆದ ಕೆಲ ದಿನಗಳಿಂದ ಜಿಟಿ ಜಿಟಿ ಮಳೆ ಕಂಡಿದ್ದ ಬೆಂಗಳೂರಿಗರು ಇದು ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಹೌದು ಬೆಂಗಳೂರಿನಲ್ಲಿ ಇಂದು, ಸೋಮವಾರ ಸೂರ್ಯನ ಸುತ್ತ ಮೂಡಿದ್ದ ಉಂಗುರದಂತಹ ಕಾಮನಬಿಲ್ಲು ಗೋಚರಿಸಿದೆ. ಸದ್ಯ ಇದರ ಫೋಟೋಗಳು ವೈರಲ್ ಆಗಿವೆ.

ಮಾದರಿ ಗ್ರಾಮ;  ಇಲ್ಲಿವರೆಗೆ ಒಂದೇ ಒಂದು ಕೊರೋನಾ ಕೇಸ್ ಇಲ್ಲ...

HD devegowda suggestion to China coronavirus top 10 News of May 24 ckm

 ಕೊರೋನಾ ಸೋಂಕಿನ ವಿರುದ್ಧ ಇಡೀ ದೇಶವೇ  ಹೋರಾಟ ಮಾಡಲು ಆರಂಭಿಸಿ ವರ್ಷವೇ ಕಳೆದಿದೆ. ಆದರೆ ಓರಿಸ್ಸಾದ ಹಳ್ಳಿಯೊಂದು ಎಲ್ಲ ಸೋಂಕನ್ನು ಮೀರಿ ನಿಂತಿದೆ. 

Follow Us:
Download App:
  • android
  • ios