ರೈತರಿಗೆ ವಿಷ ಹಾಕ್ತಿದ್ದ ಫ್ಯಾಕ್ಟರಿ ಕ್ಲೋಸ್!

ಇದು ಬಿಗ್ 3 ವರದಿ ಪ್ರಸಾರದ ಇಂಪ್ಯಾಕ್ಟ್

ಲಾಕೌಟ್ ಆಯ್ತು ಅಂಬುಜಾ ಸಿಮೆಂಟ್ ಫ್ಯಾಕ್ಟರಿ

ರೈತರಿಗೆ ವಿಷ ಹಾಕುತ್ತಿದ್ದ ಫ್ಯಾಕ್ಟರಿ ತ್ಯಾಜ್ಯ

ತ್ಯಾಜ್ಯದಿಂದ ಗ್ರಾಮದ ಕೆರೆ ನೀರು ಕಲುಷಿತ

First Published Jul 14, 2018, 3:50 PM IST | Last Updated Jul 14, 2018, 3:50 PM IST

ಹಾವೇರಿ(ಜು.14]): ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಕ್ರಾಸ್ ಬಳಿ ಇದ್ದ ಅಂಬುಜಾ ಫ್ಯಾಕ್ಟರಿ, ತನ್ನ ಕಾರ್ಖಾನೆ ತ್ಯಾಜ್ಯವನ್ನು ಗ್ರಾಮದ ಕೆರೆಗೆ ಬಿಡುತ್ತಿತ್ತು. ನಿಮ್ಮ ಸುವರ್ಣನ್ಯೂಸ್ ನ  ಬಿಗ್ 3 ಈ ಕುರಿತು ವರದಿ ಪ್ರಸಾರ ಮಾಡುತ್ತಿದ್ದಂತೇ ಎಚ್ಚೆತ್ತ ಜಿಲ್ಲಾಡಳಿತ ಕೂಡಲೇ ಫ್ಯಾಕ್ಟರಿ ಲಾಕೌಟ್ ಗೆ ಆದೇಶ ನೀಡಿದೆ.

ಹೌದು, ಬಿಗ್ 3 ನಲ್ಲಿ ಅಂಬುಜಾ ಫ್ಯಾಕ್ಟರಿ ಕುರಿತು ವರದಿ ಪ್ರಸಾರವಾಗುತ್ತಿದ್ದಂತೇ, ಹಾವೇರಿ ಜಿಲ್ಲಾಧಿಕಾರಿ ವೆಂಕಟೇಶ್ ಸ್ಥಳಕ್ಕೆ ದೌಡಾಯಿಸಿ ಕೂಡಲೇ ಫ್ಯಾಕ್ಟರಿಯನ್ನು ಮುಚ್ಚುವಂತೆ ಆದೇಶ ನೀಡಿದರು.

ಈ ಹಿನ್ನೆಲೆಯಲ್ಲಿ ಕಳೆದ ಒಂದು ದಶಕದಿಂದ ಕಲುಷಿತ ನೀರು ಕುಡಿಯುತ್ತ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಗ್ರಾಮಸ್ಥರು ನೆಮ್ಮದಿಯ ನಿದ್ದೆ ಮಾಡಿದರು. ಅಲ್ಲದೇ ಸುವರ್ಣನ್ಯೂಶ್ ಕಾರ್ಯವನ್ನು ಕೊಂಡಾಡಿದರು.