Asianet Suvarna News Asianet Suvarna News

ಎಟಿಎಂ ಕಾರ್ಡ್‌ ಬದಲಿಗೆ ಬ್ಯಾಂಕ್‌ ಮುಂದೆ ಕ್ಯೂ!

ಎಟಿಎಂ ಕಾರ್ಡ್‌ ಬದಲಿಗೆ ಬ್ಯಾಂಕ್‌ ಮುಂದೆ ಕ್ಯೂ!  ಡಿ.31ರ ಬಳಿಕ ಹಳೇ ಕಾರ್ಡ್‌ಗಳ ಮಾನ್ಯತೆ ರದ್ದು |  ಚಿಪ್‌ ಅಳವಡಿಸಿದ ಕಾರ್ಡಿಗಾಗಿ ಗ್ರಾಹಕರ ದಂಡು

Have old SBI ATM card? Rush, this deadline looms!
Author
Bengaluru, First Published Dec 19, 2018, 9:01 AM IST

ನವದೆಹಲಿ (ಡಿ.19): ನೋಟು ಅಪನಗದೀಕರಣದ ಸಂದರ್ಭದಲ್ಲಿ ಹಳೇ ನೋಟುಗಳನ್ನು ಹೊಸ ನೋಟಿನೊಂದಿಗೆ ಬದಲಿಸಿಕೊಳ್ಳಲು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿದ್ದ ಸಾರ್ವಜನಿಕರಿಗೀಗ ಚಿಪ್‌ ಆಧಾರಿತ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಪಡೆಯಲು ಬ್ಯಾಂಕ್‌ಗಳ ಮುಂದೆ ತಾಸುಗಟ್ಟಲೇ ನಿಲ್ಲುವ ಅನಿವಾರ್ಯತೆ ಎದುರಾಗಿದೆ. ಡಿ.31ರೊಳಗೆ ಈ ಕಾರ್ಡ್‌ ಬದಲಾವಣೆ ಅನಿವಾರ್ಯವಾಗಿರುವ ಕಾರಣ, ಇದ್ದಕ್ಕಿದ್ದಂತೆ ಜನರೀಗ ಬ್ಯಾಂಕ್‌ಗಳತ್ತ ಧಾವಿಸತೊಡಗಿದ್ದಾರೆ. ಹೀಗಾಗಿ ಮತ್ತೆ ಬ್ಯಾಂಕ್‌ಗಳ ಮುಂದೆ ಸರದಿ ಕಾಣತೊಡಗಿದೆ.

ಡಿ.31ರ ಬಳಿಕ ಹಳೆಯ ಕಾರ್ಡ್‌ ಬಳಸಿ ಯಾವುದೇ ಹಣಕಾಸು ವಹಿವಾಟು ನಡೆಸುವುದು ಸಾಧ್ಯವಿಲ್ಲ. ಹೀಗಾಗಿಯೇ ಗ್ರಾಹಕರು ಆತಂಕಕ್ಕೆ ಗುರಿಯಾಗಿದ್ದಾರೆ. ಕಾರ್ಡ್‌ ಬದಲಾವಣೆಗೆ ಬಹಳ ಹಿಂದೆಯೇ ಡಿ.31 ಕಡೆಯ ದಿನ ಎಂದು ಬ್ಯಾಂಕ್‌ಗಳು ಘೋಷಣೆ ಮಾಡಿದ್ದವಾದರೂ, ಹೆಚ್ಚಿನ ಗ್ರಾಹಕರು ಬ್ಯಾಂಕ್‌ಗಳತ್ತ ಬಂದಿರಲಿಲ್ಲ. ಹೀಗಾಗಿ ಗಡುವು ಸಮೀಪಿಸುತ್ತಾ ಬಂದಿದ್ದರೂ ಇದುವರೆಗೆ ಶೇ.50-60ರಷ್ಟುಕಾರ್ಡ್‌ಗಳನ್ನು ಮಾತ್ರವೇ ಬದಲಾವಣೆ ಮಾಡಲು ಸಾಧ್ಯವಾಗಿದೆ ಎಂದು ಬ್ಯಾಂಕ್‌ ಮೂಲಗಳು ಹೇಳಿವೆ.

ಹೊಸ ಕಾರ್ಡ್‌ ಹೇಗಿದೆ?:

ಹೊಸ ಕಾರ್ಡ್‌ಗಳ ಹಿಂಭಾಗದಲ್ಲಿ ಮ್ಯಾಗ್ನೆಟಿಕ್‌ ಸ್ಟ್ರಿಪ್‌ ಅಳವಡಿಸಲಾಗಿದ್ದು, ಅದರಲ್ಲಿ ಚಿಪ್‌ ಅಳವಡಿಕೆಯಾಗಿರುತ್ತದೆ. ಇದರಲ್ಲಿ ಗ್ರಾಹಕರ ಎಲ್ಲಾ ಮಾಹಿತಿ ಅಡಕವಾಗಿರುತ್ತದೆ. ಹಿಂದಿನ ಕಾರ್ಡ್‌ಗಳಿಗೆ ಹೋಲಿಸಿದರೆ ಇವುಗಳ ಮೂಲಕ ವಂಚನೆ ಮಾಡುವುದು ಕಷ್ಟ. ಹೀಗಾಗಿ ಇಂಥ ಕಾರ್ಡ್‌ಗಳ ಬಳಕೆಗೆ ಬ್ಯಾಂಕ್‌ಗಳು ಮುಂದಾಗಿವೆ.

ಕೆಲವು ಬ್ಯಾಂಕ್‌ಗಳು ಈಗಾಗಲೇ ಗ್ರಾಹಕರಿಗೆ ಅವರ ವಿಳಾಸಕ್ಕೇ ಹೊಸ ಕಾರ್ಡ್‌ ಪೂರೈಕೆ ಮಾಡಿವೆ. ಇನ್ನು ಕೆಲ ಬ್ಯಾಂಕ್‌ಗಳು, ಶಾಖೆಗೆ ಬಂದು ಕಾಡ್‌ ಬದಲಾಯಿಸಿಕೊಳ್ಳಲು ಸೂಚಿಸಿವೆ. ಜೊತೆಗೆ ಕಳೆದ ಒಂದು ವರ್ಷದಿಂದ ಒಮ್ಮೆಯೂ ಕಾರ್ಡ್‌ ಬಳಕೆ ಮಾಡದ ಗ್ರಾಹಕರಿಗೆ ಬ್ಯಾಂಕ್‌ಗಳಿಗೆ ಬಂದು ಕಾರ್ಡ್‌ ಪಡೆಯಲು ಸೂಚಿಸಲಾಗಿದೆ. ಹೀಗಾಗಿ ಅಂಥ ಬ್ಯಾಂಕ್‌ಗಳಲ್ಲಿ ಸರದಿ ಕಂಡುಬಂದಿದೆ.

ಕೆಲವು ಬ್ಯಾಂಕ್‌ಗಳು ಹೊಸ ಕಾರ್ಡ್‌ಗೆ ಶುಲ್ಕ ವಿಧಿಸುತ್ತಿದರೆ, ಕೆಲವು ಬ್ಯಾಂಕ್‌ಗಳು ಉಚಿತವಾಗಿಯೇ ವಿತರಣೆ ಮಾಡುತ್ತಿವೆ.

Follow Us:
Download App:
  • android
  • ios