ಹಿಂದುತ್ವಕ್ಕಾಗಿ 5 ಮಕ್ಕಳು: ಬಿಜೆಪಿ ಶಾಸಕ ಕಟ್ಟಪ್ಪಣೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 5:02 PM IST
Have 5 kids to preserve Hindutva: BJP MLA Surendra Singh
Highlights

ಹಿಂದೂ ದಂಪತಿ 5 ಮಕ್ಕಳನ್ನು ಹೊಂದಬೇಕು

ಹಿಂದುತ್ವದ ಉಳಿವಿಗಾಗಿ ಹೆಚ್ಚು ಮಕ್ಕಳು ಪಡೆಯಿರಿ

ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ

ಹಿಂದೂಗಳು ಅಲ್ಪಸಂಖ್ಯಾತರಾಗುವ ದಿನ ದೂರವಿಲ್ಲ
 

ನವದೆಹಲಿ(ಜು.26): ಮಕ್ಕಳು ದೇವರ ಪ್ರಸಾದವಾಗಿದ್ದು, ಹಿಂದೂಗಳು ಹೆಚ್ಚು ಮಕ್ಕಳನ್ನು ಹೊಂದುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರವಾಗಬೇಕು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

ಹಿಂದೂ ದಂಪತಿ ಕಡ್ಡಾಯವಾಗಿ ಐದು ಮಕ್ಕಳನ್ನು ಹೊಂದಲೇಬೇಕು ಎಂದು ಹೇಳಿರುವ ಸುರೇಂದ್ರ ಸಿಂಗ್, ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿಸಲು ಈ ಕ್ರಮ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ದಂಪತಿ ಕನಿಷ್ಠ ಐದು ಮಕ್ಕಳನ್ನು ಹೊಂದಬೇಕೆನ್ನುವುದು ಪ್ರತಿ ಆಧ್ಯಾತ್ಮಿಕ ನಾಯಕರ ಬಯಕೆಯಾಗಿದೆ. ಇದರಿಂದಾಗಿ ಹಿಂದುತ್ವ ಬಲಿಷ್ಠವಾಗುತ್ತದೆ. ಹಿಂದೂಗಳು ಪ್ರತೀ ಪುರುಷನಿಗೆ ಇಬ್ಬರು, ಮಹಿಳೆಯರಿಗೆ ಇಬ್ಬರು ಮತ್ತು ಒಂದು ಹೆಚ್ಚುವರಿ ಮಗುವಿಗೆ ಜನ್ಮ ನೀಡಬೇಕು. ಹಿಂದುಗಳು ಬಲಿಷ್ಠರಾದಾಗ ಮಾತ್ರ ಭಾರತ ಬಲಿಷ್ಠವಾಗುತ್ತದೆ ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.

ಜನಸಂಖ್ಯೆ ನಿಯಂತ್ರಣದಲ್ಲಿ ಸಮತೋಲನ ಇಲ್ಲದಿದ್ದರೆ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಈ ಕುರಿತು ಹಿಂದೂ ಸಮುದಾಯ ಕಾಳಜಿ ವಹಿಸಬೇಕು ಎಂದು ಸುರೇಂದ್ರ ಸಿಂಗ್ ಎಚ್ಚರಿಸಿದ್ದಾರೆ.

loader