ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ; ಕುತೂಹಲ ಮೂಡಿಸಿದೆ ಇಂದಿನ ವಿಚಾರಣೆ

Hassana DC Rohini Sindhuri Transfer Hearing Today
Highlights

ಡಿಸಿ ಹುದ್ದೆಯಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್’ನಲ್ಲಿ ನಡೆಯಲಿದೆ. 

ಹಾಸನ (ಏ. 23): ಡಿಸಿ ಹುದ್ದೆಯಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್’ನಲ್ಲಿ ನಡೆಯಲಿದೆ. 

ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು ಸಿಎಟಿ.  ಸಿಎಟಿ ಆದೇಶ ಪ್ರಶ್ನಿಸಿ 2 ನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ರೋಹಿಣಿ ಸಿಂಧೂರಿ.  ಪ್ರಕರಣ ಇತ್ಯರ್ಥವಾಗುವ ತನಕ ವರ್ಗಾವಣೆ ತಡೆಗೆ ಅರ್ಜಿಯಲ್ಲಿ ರೋಹಿಣಿ ಮನವಿ ಮಾಡಿದ್ದಾರೆ. 

ಹಾಲಿ ಹಾಸನ ಡಿಸಿ ರಂದೀಪ್ ಈಗಾಗಲೇ ಹೈಕೋರ್ಟ್’ನಲ್ಲಿ ಕೇವಿಯಟ್ ಹಾಕಿದ್ದಾರೆ.  ನನ್ನ ವಾದ ಆಲಿಸಿ ನಂತರ ಆದೇಶ ನೀಡುವಂತೆ ಡಿಸಿ ರಂದೀಪ್ ಮನವಿ ಮಾಡಿಕೊಂಡಿದ್ದಾರೆ. 
ಸಿಂಧೂರಿ ಅರ್ಜಿ ಕುರಿತು ಯಾವುದೇ ಆದೇಶ ಹೊರಡಿಸಬಾರದು ಎಂದು ಕೇಳಿಕೊಂಡಿದ್ದಾರೆ. 

loader