ಹಾಸನ(ಜ.12): 600 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸನ-ಆಲೂರು-ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾಣ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. 30 ಕಿ.ಮೀ  ರೈಲು ಮಾರ್ಗಕ್ಕೆ ಅನುಮತಿ‌ ಸಿಕ್ಕಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಹಳ್ಳಿಯಿಂದ ದಿಲ್ಲಿಗೆ ಕರಾವಳಿ ಮಕ್ಕಳ ವಿಜ್ಞಾನ ಸ್ವಚ್ಛತಾ ದೀವಿಗೆ!

ಇದೇ ವೇಳೆ ವಿವಿಧ ಯೋಜನಗಳ ಬಗ್ಗೆಯೂ ಹೆಚ್.ಡಿ ರೇವಣ್ಣ ಮಾತನಾಡಿದರು.   ಅರಕಲಗೂಡು,ಮಂಡ್ಯದ ಕೇ.ಆರ್. ಪೇಟೆ ಮತ್ತು ಮೈಸೂರಿನ ಕೆ.ಆರ್‌.ನಗರದ ನಡುವೆ‌ 56 ಸಾವಿರ ಹೆಕ್ಟೇರ್ ಪ್ರದೇಶಕ್ಕೆ  ನೀರವಾರಿಗಾಗಿ ನಾಲೆ ಆಧುನೀಕರಣಕ್ಕೂ ಅನುಮತಿ‌ ಸಿಕ್ಕಿದೆ. 380 ಕೋಟಿ ರೂಪಾಯಿ ವೆಚ್ಚದಲ್ಲಿ ಹೇಮಾವತಿ ಬಲ ಮೇಲ್ದಂಡೆ ನಾಲೆ ಆಧುನೀಕರಣ ಮಾಡಲಾಗುವುದು ಎಂದರು.

ಇದನ್ನೂ ಓದಿ: ಈ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗ್ತಾರಾ?

ಮಾಜಿ ಸಚಿವ ಎ.ಮಂಜು ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ 10 ವರ್ಷಗಳಿಂದ ಇಲ್ಲಿನ ಜನ ನೊಂದಿದ್ದಾರೆ. ನನ್ನ ಅಧಿಕಾರಾವಧಯಲ್ಲಿ ಕಾಮಗಾರಿ ಆರಂಭವಾಗುತ್ತಿದೆ. ನನಗೆ ಕೆಲಸ ಮಾಡಲು ಜನರು ಅಧಿಕಾರ ಕೊಟ್ಟಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ  ಪ್ರತಿಕ್ರಿಯೆ ನೀಡುವಷ್ಟು ದೊಡ್ಡವ ನಾನನಲ್ಲ. ನಾನು ಲೋಕೋಪಯೋಗಿ ಸಚಿವ ಕಣಪ್ಪ ನಂಗೊತ್ತಿಲ್ಲ ಅದೆಲ್ಲ ಎಂದು ರೇವಣ್ಣ ಪ್ರಶ್ನೆಗಳಿಂದ ನುಣುಚಿಕೊಂಡರು.

ಲೋಕಸಭಾ ಸೀಟು ಹಂಚಿಕೆ‌ ವಿಚಾರ ಕುಮಾರಣ್ಣ ಮತ್ತು ದೇವೇಗೌಡರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆದರೆ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಅನ್ನೋ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡೋ ಅಗತ್ಯವಿಲ್ಲ ಎಂದು ರೇವಣ್ಣ ಹೇಳಿದ್ದಾರೆ.