Asianet Suvarna News Asianet Suvarna News

ಕದ್ದು ಹುಕ್ಕಾ ಸೇದುವಾಗ ಸಿಎಂ ದತ್ತು ಮಗಳು ಸಿಕ್ಕಿ ಬಿದ್ದಳು

ಬದುಕಿಗೋಸ್ಕರ ಶಾಲಾ ಸಮವಸ್ತ್ರದಲ್ಲೇ ಮೀನು ಮಾರಿ ಸುದ್ದಿಯಾಗಿದ್ದ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದತ್ತು ಪುತ್ರಿ ಎಂದೇ ಗುರುತಿಸಿಕೊಂಡಿರುವಳು ಇದೀಗ ನ್ಯಾಯಾಲಯದ ಮೆಟ್ಟಿಲು ಏರಿದ್ದಾಳೆ. ಇದಕ್ಕೆ ಕಾರಣ ಒಂದು ಹುಕ್ಕಾ... ಸೋಶಿಯಲ್ ಮೀಡಿಯಾ..

Hanan to move legally against those who shared her hookah video Kerala
Author
Bengaluru, First Published Nov 26, 2018, 4:16 PM IST

ಕೊಚ್ಚಿ(ನ.26)  ಮೀನು ಮಾರಿ ಬದುಕು ಕಟ್ಟಿಕೊಂಡ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶ್ಲಾಘನೆ ಪಡೆದುಕೊಂಡಿದ್ದ ಕೇರಳದ  ಹನಾನ್ ಹನಾನಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಪಂಚತಾರಾ ಹೊಟೇಲ್‌ ಒಂದರಲ್ಲಿ ಹನಾನಿ ಹುಕ್ಕಾ ಸೇದುತ್ತಿರುವ ವಿಡಿಯೋ ಇದಕ್ಕೆಲ್ಲ ಮೂಲ ಕಾರಣ. ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಹನಾನಿ, ನಾನು ಹುಕ್ಕಾ ಸೇದಿದ್ದೇನೆ,, ನಿಜ ಆದರೆ ನನ್ನ ಗೌರವಕ್ಕೆ ಚ್ಯುತಿ ಬರುವ ರೀತಿ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.  ಸಾವಿರ ರೂ. ಮೊತ್ತದ ಹುಕ್ಕಾ ಸೇದಿದ್ದೇನೆ ಎಂದು ಬಿಂಬಿಸಲಾಗಿದೆ. ಆದರೆ ಸತ್ಯ ಬೇರೆ ಇದೆ ಎಂದು ಕೊಚ್ಚಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

ಯಾರೀಕೆ? ಕೇರಳದ ಸಿಎಂ ದತ್ತು ಮಗಳು, ಮೀನು ಮಾರುವ ಹುಡುಗಿ

ಫೇಸ್ ಬುಕ್‌ನಲ್ಲಿ ಇದಕ್ಕೆ ಸ್ಪಷ್ಟನೆ ನೀಡಿರುವ ಹನಾನ್, ಹುಕ್ಕಾ ಕಂಡ ನನಗೆ ಅದರ ಮೇಲೆ ಕುತೂಹಲ ಮೂಡಿತು. ಅರಬ್ಬರು ರಿಫ್ರೇಶ್‌ ಆಗಲು ಇದನ್ನು ಸೇದುತ್ತಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಇದರಲ್ಲಿ ನಿಕೋಟಿನ್ ಸೇರಿದಂತೆ ಯಾವ ಮಾದಕ ಪದಾರ್ಥಗಳು ಇಲ್ಲ ಎಂದರು.. ಈ ಕಾರಣದಿಂದ ನಾ,ನು ಒಮ್ಮೆ ಪ್ರಯತ್ನ ಮಾಡಿದೆ. ಆದರೆ ಇದನ್ನೇ ದೊಡ್ಡದಾಗಿ ನನ್ನ ಹೆಸರಿಗೆ ಧಕ್ಕೆ ಬರುವಂತೆ ಚಿತ್ರಿಸಲಾಗಿದೆ ಎಂದಿದ್ದಾರೆ.

 

Follow Us:
Download App:
  • android
  • ios