Asianet Suvarna News Asianet Suvarna News

ಬರಿ ಮೈ ಪುರುಷರಿಂದ ಹದಿಹರೆಯದ ಹೆಣ್ಣು ಮಕ್ಕಳಿಗೆ ರಿಕ್ವೆಸ್ಟ್

 ಹದಿಹರೆಯದ ಹೆಣ್ಣು ಮಕ್ಕಳಿಗೆ ಅರೆ ಬೆತ್ತಲೆ ಮಧ್ಯ ವಯಸ್ಸಿನ ಗಂಡಸರ ‘ಸ್ನೇಹ ಪ್ರಸ್ತಾಪ’ವನ್ನು ಕಳುಸುತ್ತಿದ್ದು, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 

Half Naked men Send Friend Request Girls
Author
Bengaluru, First Published Nov 12, 2018, 11:46 AM IST

ಲಂಡನ್: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಹದಿಹರೆಯದ ಹೆಣ್ಣು ಮಕ್ಕಳಿಗೆ ಅರೆ ಬೆತ್ತಲೆ ಮಧ್ಯ ವಯಸ್ಸಿನ ಗಂಡಸರ ‘ಸ್ನೇಹ ಪ್ರಸ್ತಾಪ’ವನ್ನು ಕಳುಸುತ್ತಿದ್ದು, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 

ಫೇಸ್‌ಬುಕ್ ಬಳಸುತ್ತಿರುವ ಅಪ್ರಾಪ್ತ ಬಾಲಕಿಯರಿಗೆ ಬರಿ ಮೈಯಲ್ಲಿ ಇರುವ  ಮಧ್ಯವಯಸ್ಸಿನ ಪುರುಷ ಫ್ರೆಂಡ್ ಸಲಹೆಗಳು ಬರುತ್ತಿದೆ ಎಂದು ಟೆಲಿಗ್ರಾಫ್ ವರದಿ ಪ್ರಕಟಿಸಿದೆ. 

ಮಕ್ಕಳ ಸ್ನೇಹಿ ಗುಂಪುಗಳ ಮೂಲಕ ಹದಿಹರೆಯದ ಬಾಲಕಿಯರ ಪ್ರೊಫೈಲ್‌ಗಳಿಗೆ ಮದುವೆ ವಯಸ್ಸಿನ ಪುರುಷರು ಪ್ರವೇಶಿಸುತ್ತಿದ್ದಾರೆ. 

ಸ್ನೇಹಿತರ ಸಲಹೆ ನೀಡುವ ಫೇಸ್‌ಬುಕ್ ಕ್ರಮಾವಳಿಯ ಮೂಲಕ ಸುಲಭ ವಾಗಿ ಬಾಲಕಿಯರ ಜೊತೆ ಲೈವ್ ಸ್ಟ್ರೀಮಿಂಗ್ ವೆಬ್‌ಸೈಟ್  ಗೆ ಕರೆಯುತ್ತಿದ್ದಾರೆ. ಇದು ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯಕ್ಕೆ ಎಡೆ ಮಾಡಿಕೊಡುತ್ತಿರುವುದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

Follow Us:
Download App:
  • android
  • ios