ಅಹಮದಾಬಾದ್[ಸೆ. 04] 16 ವರ್ಷದ ಬಾಲಕ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ದೂರು ಉತ್ತರ ಪ್ರದೇಶದ ವಾಟ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

5 ನೇ ತರಗತಿ ವಿದ್ಯಾರ್ಥಿನಿ ಮೇಲೆ 10 ನೇ ತರಗತಿ ವಿದ್ಯಾರ್ಥಿ ಹಲವು ಸಾರಿ ರೇಪ್ ಎಸಗಿದ್ದಾನೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಆರೋಪಿ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ವಾಸವಿದ್ದರೆ ಸಂತ್ರಸ್ತ ಬಾಲಕಿ ಎರಡನೇ ಮಹಡಿಯಲ್ಲಿ ವಾಸವಿದ್ದಳು.

ತನ್ನ ಸ್ಮಾರ್ಟ್ ಫೋನ್ ನಲ್ಲಿ ಸಿನಿಮಾ ಮತ್ತು ವೆಬ್ ಸೀರಿಸ್ ಗಳನ್ನು ತೋರಿಸುತ್ತೇನೆ ಎಂದು ಹೇಳಿ ಬಾಲಕಿಯನ್ನು ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಮಗಳ ಮೇಲೆ ಅತ್ಯಾಚಾರ ನಡೆಯುತ್ತಿದ್ದ ಘೋರ ದೃಶ್ಯವನ್ನು ಬಾಲಕಿಯ ತಾಯಿ ಕಂಡ ನಂತರ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಇತ್ತೀಚೆಗೆ ಹೊಸ ಸ್ಮಾರ್ಟ್ ಪೋನ್ ಒಂದನ್ನು ಖರೀದಿ ಮಾಡಿದ್ದರು. ಬಾಲಕ ಇದನ್ನೇ ನೆಪ ಮಾಡಿಕೊಂಡು ನಿನಗೆ ಸಿನಿಮಾ ನೋಡುವುದನ್ನು, ಹೊಸ ಅಪ್ಲಿಕೇಶನ್ ಬಳಕೆ ಮಾಡುವುದನ್ನು ಹೇಳಿಕೊಡುತ್ತೇನೆ ಎಂದು ನಂಬಿಸಿ ಕರೆದೊಯ್ದಿದ್ದ.