ಮುಂದಿನ ವರ್ಷದಿಂದ ಭಾರೀ ಭದ್ರತೆ ನಂಬರ್ ಪ್ಲೇಟ್

news | Saturday, April 21st, 2018
Sujatha NR
Highlights

ಮುಂದಿನ ವರ್ಷದಿಂದ ವಾಹನಗಳಿಗೆ ಹೆಚ್ಚಿನ ಭದ್ರತೆಯ ತಿರುಚಲಾಗದ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ)ಗಳು ವಾಹನಕ್ಕೇ ಅಳವಡಿಕೆಯಾಗಿ ಬರಲಿವೆ.

ನವದೆಹಲಿ: ಮುಂದಿನ ವರ್ಷದಿಂದ ವಾಹನಗಳಿಗೆ ಹೆಚ್ಚಿನ ಭದ್ರತೆಯ ತಿರುಚಲಾಗದ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ)ಗಳು ವಾಹನಕ್ಕೇ ಅಳವಡಿಕೆಯಾಗಿ ಬರಲಿವೆ.

2019, ಜ.1ರಿಂದಲೇ ಈ ನಿಯಮ ಜಾರಿಗೊಳ್ಳಲಿದ್ದು, ಈ ನಂಬರ್ ಪ್ಲೇಟ್ ಎಲ್ಲ ಭದ್ರತಾ ಲಕ್ಷಣಗಳನ್ನು ಒಳಗೊಂಡಿರಲಿದೆ. ವಾಹನ ಕಳ್ಳತನವನ್ನು ಸುಲಭವಾಗಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ಭದ್ರತಾ ಸುರಕ್ಷತೆಗಳಿರಲಿವೆ.

ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು 13 ವರ್ಷಗಳ ಹಿಂದೆಯೇ ಕೆಲವು ರಾಜ್ಯಗಳಲ್ಲಿ ಕಡ್ಡಾಯ ಗೊಳಿಸಲಾಗಿತ್ತು. ಆದರೆ ಅದು ವಿಫಲವಾಗಿತ್ತು. ಹಾಗಾಗಿ ಈಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹೊಸ ಕರಡು ನಿಯಮಗಳನ್ನು ರೂಪಿಸಿದೆ.

Comments 0
Add Comment

  Related Posts

  Traffic Jam in Shiradi Ghat

  video | Monday, January 22nd, 2018

  CM Siddramaiah Had Breakfast in Silver plate

  video | Friday, December 29th, 2017

  Traffic Jam in Shiradi Ghat

  video | Monday, January 22nd, 2018
  Sujatha NR