Asianet Suvarna News Asianet Suvarna News

ಅಮಿತ್ ಶಾ ರಥಯಾತ್ರೆಗೆ ಸರ್ಕಾರದ ಬ್ರೇಕ್!

ಅಮಿತ್ ಶಾ ರಥಯಾತ್ರೆಗೆ ನುಮತಿ ನಿರಾಕರಣೆ! ಅಮಿತ್ ಶಾ ಉದ್ದೇಶಿತ ರಥಯಾತ್ರೆ ತಡೆದ ಸರ್ಕಾರ! ಬಿಜೆಪಿ ಯೋಜನೆಗೆ ತಿರುಮಂತ್ರ ಹಾಕಿದ ಪಶ್ಚಿಮ ಬಂಗಾಳ ಸರ್ಕಾರ! ಕೋಮುಗಲಭೆ ಕಾರಣ ನೀಡಿ ರಥಯಾತ್ರೆಗೆ ಅನುಮತಿ ನಿರಾಕರಣೆ  

Government Denies Permission To Amit Shah Rath Yatra
Author
Bengaluru, First Published Dec 6, 2018, 5:36 PM IST

ಕೋಲ್ಕತಾ(ಡಿ.06): ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಉದ್ದೇಶಿತ ರಥ ಯಾತ್ರೆಗೆ ಅನುಮತಿ ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದೆ.

ಈ ಕುರಿತು ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಕೋಲ್ಕತಾ ಹೈಕೋರ್ಟ್ ಗೆ ಮಾಹಿತಿ ನೀಡಿದ್ದು, ಕೋಮುಗಲಭೆ ಭೀತಿ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗಬೇಕಿದ್ದ ಬಿಜೆಪಿ ಅಧ್ಯಕ್ಷರ ರಥಯಾತ್ರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ರಥ ಯಾತ್ರೆಯಿಂದ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಅಡ್ವೋಕೇಟ್ ಜನರಲ್ ಕಿಶೋರ್ ದತ್ತಾ ಸಮರ್ಥಿಸಿಕೊಂಡಿರು. 

ಆದರೆ ಇದಕ್ಕೆ ಬಿಜೆಪಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರಾದರೂ, ಮಧ್ಯ ಪ್ರವೇಶಿಸಿದ ನ್ಯಾಯಾಧೀಶರು ಅಹಿತಕರ ಘಟನೆ ನಡೆದರೆ ಯಾರು ಜಾವಾಬ್ದಾರರು ಎಂದು ಬಿಜೆಪಿ ಪರ ವಕೀಲ ಅನಿದ್ಯಾ ಮಿತ್ರಾ ಅವರನ್ನು ಪ್ರಶ್ನಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ ಎಂದೂ ನ್ಯಾಯಾಧೀಶರೂ ಪ್ರಶ್ನಿಸಿದರು.

Follow Us:
Download App:
  • android
  • ios