ನವದೆಹಲಿ(ಜ.26): ಅಂತರ್ಜಾಲ ದೈತ್ಯ ಗೂಗಲ್ ಪ್ರತಿ ವಿಶೇಷ ಸಂದರ್ಭಗಳ ಸಂಭ್ರವನ್ನು ಡಬಲ್ ಮಾಡಿದೆ. ಇದೀಗ 71ನೇ ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಗೂಗಲ್ ಡೂಡಲ್ ವೈವಿದ್ಯತೆ, ಸಾಮರಸ್ಯ ಭಾರತವನ್ನು ಪ್ರದರ್ಶಿಸಿದೆ.

ಇದನ್ನೂ ಓದಿ: 'ಮಕ್ಕಳ ದಿನಾಚರಣೆ' ಗೂಗಲ್ ಡೂಡಲ್ ವಿಶ್; ಮಕ್ಕಳು ಫುಲ್ ಖುಷ್!.

ಭಾರತ ಸರ್ಕಾರ ಆ್ಯಕ್ಟ್ (1935)ರ ಬದಲು 1950, ಜನವರಿ  26ರಂದು ಭಾರತ ಗಣತಂತ್ರವನ್ನು ಜಾರಿಗೆ ತಂದಿತು. 1949ರ ನವೆಂಬರ್ 26ರಂದು ಅಸೆಂಬ್ಲಿಯಲ್ಲಿ ಪ್ರಸ್ತಾಪವಾದ ಸಂವಿಧಾನ, 1960ರ ಜನವರಿ 26ರಿಂದ  ಜಾರಿಯಾಯಿತು. ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತಿದೆ. ಈ ಬಾರಿ 71ನೇ ಗಣರಾಜ್ಯೋತ್ಸವಕ್ಕೆ ಗೂಗಲ್ ಡೂಡಲ್‌ ಕೂಡ ಕೊಡುಗೆ ನೀಡಿದೆ.

ಇದನ್ನೂ ಓದಿ: ವಿಕ್ರಮ್ ಸಾರಾಭಾಯಿ 100 ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ.

ಸ್ವಾತಂತ್ರ್ಯ ದಿನಾಚರಣೆ, ಮಹಾತ್ಮಾ ಗಾಂಧಿ ಜಯಂತಿ ಸೇರಿದಂತೆ ಭಾರತದ ಐತಿಹಾಸಿಕ ದಿನಗಳಲ್ಲಿ ಗೂಗಲ್ ಡೂಡಲ್ ಮೂಲಕ ವಿಶೇಷ ಕೂಡುಗೆ ನೀಡಿದೆ. ಈ ಬಾರಿ  ಭಾರತದ ವಿವಿಧತೆಯಲ್ಲಿ ಏಕತೆಯನ್ನು ಎತ್ತಿಹಿಡಿಯೋ ಮೂಲಕ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದೆ.