Asianet Suvarna News Asianet Suvarna News

ಗುಡ್‌ಬೈ 2018: ಈ ವರ್ಷ ಟ್ರೆಂಡ್ ಆದ ಸುದ್ದಿಗಳಿವು

2018 ಕ್ಕೆ ವಿದಾಯ ಹೇಳಿ 2019 ನ್ನು ವೆಲ್ ಕಮ್ ಮಾಡುವ ಸಮಯ ಹತ್ತಿರ ಬಂದಿದೆ. 2018 ಇನ್ನು ನೆನಪು ಮಾತ್ರ. ಈ ವರ್ಷ ಅನೇಕ ಸಿಹಿಯೂ ಇತ್ತು. ಕಹಿಯೂ ಇತ್ತು. ಬೇವು-ಬೆಲ್ಲದ ಸಮ್ಮಿಶ್ರಣವೇ 2018. ಈ ವರ್ಷದ ಪ್ರಮುಖ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ ಬನ್ನಿ.

Goodbye 2018: Trending news of 2018
Author
Bengaluru, First Published Dec 31, 2018, 4:22 PM IST

ಬೆಂಗಳೂರು (ಡಿ. 31):  2018 ಕ್ಕೆ ವಿದಾಯ ಹೇಳಿ 2019 ನ್ನು ವೆಲ್ ಕಮ್ ಮಾಡುವ ಸಮಯ ಹತ್ತಿರ ಬಂದಿದೆ. 2018 ಇನ್ನು ನೆನಪು ಮಾತ್ರ. ಈ ವರ್ಷ ಅನೇಕ ಸಿಹಿಯೂ ಇತ್ತು. ಕಹಿಯೂ ಇತ್ತು. ಬೇವು-ಬೆಲ್ಲದ ಸಮ್ಮಿಶ್ರಣವೇ 2018. ಈ ವರ್ಷದ ಪ್ರಮುಖ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ ಬನ್ನಿ.

ಮೀ ಟೂ

Goodbye 2018: Trending news of 2018

ಶೃತಿ ಹರಿಹರನ್ ಮೀಟೂ ಎಲ್ಲಿವರೆಗೆ ಬಂತು?

ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತ  ಲೈಂಗಿಕ ಕಿರುಕುಳದ ಆರೋಪ ಮಾಡಿದರು. ಅಲ್ಲಿಂದ ಭಾರತೀಯ ಚಿತ್ರರಂಗದಲ್ಲಿ ಹಲವು ಖ್ಯಾತನಟರು ‘ಮೀ ಟೂ’ ಆರೋಪಕ್ಕೆ ಗುರಿಯಾದರು. ಪತ್ರಕರ್ತ ಎಂ.ಜೆ.
ಅಕ್ಬರ್ ಸಚಿವ ಸ್ಥಾನ ಕಳೆದುಕೊಂಡರು. ಕನ್ನಡ ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ಕಾನೂನು ಸಮರವನ್ನೇ ಸಾರಿದರು.

ರಫೇಲ್

Goodbye 2018: Trending news of 2018

ರಫೇಲ್ ಡೀಲ್ ತೀರ್ಪು: ಮೋದಿಗೆ ಜಯ, ರಾಹುಲ್‌ಗೆ ಮುಖಭಂಗ!

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸರಣಿ ದಾಳಿ ನಡೆಸಿತು. ಈ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಕಾನೂನು ಹೋರಾಟದಲ್ಲಿ ಕೇಂದ್ರ ಸರ್ಕಾರ ಪಾರಾಯಿತು. 

ಶಬರಿಮಲೆ

Goodbye 2018: Trending news of 2018

ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಯಾವ ವಯಸ್ಸಿನ ಮಹಿಳೆಯರು ಬೇಕಾದರೂ ಪ್ರವೇಶಿಸಬಹುದು ಎಂದು ಸೆ.೨೮ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದಾಗ ದೊಡ್ಡ ಹೋರಾಟವೇ ಆರಂಭವಾಯಿತು. 10 ರಿಂದ 50 ವರ್ಷ ದೊಳಗಿನ ಮಹಿಳೆಯರ ಪ್ರವೇಶಕ್ಕೆ ಈ ವರ್ಷ ಅವಕಾಶ ಸಿಗಲೇ ಇಲ್ಲ.

ಸಾಲ ಮನ್ನಾ

Goodbye 2018: Trending news of 2018

ಸಾಲಮನ್ನಾ ಹಣ ಹೊಂದಿಸಲು ಸರ್ಕಾರದಿಂದ ಇನ್ನೊಂದು ಪ್ಲ್ಯಾನ್!

ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಘೋಷಿಸಿದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಅಸ್ಸಾಂ ಸರ್ಕಾರಗಳೂ ಅದೇ ಹಾದಿ ತುಳಿದವು. 

ಮಕ್ಕಳ ಕಳ್ಳರು

Goodbye 2018: Trending news of 2018

ಮಕ್ಕಳ ಕಳ್ಳರ ವದಂತಿ: ಸಾರ್ವಜನಿಕರಿಗೆ ಸಿಎಂ ಮನವಿ

ಅನುಮಾನಾಸ್ಪದ ವ್ಯಕ್ತಿಗಳನ್ನು ಮಕ್ಕಳ ಕಳ್ಳರೆಂದು ಬಡಿದು ಕೊಲ್ಲುವ ಘಟನೆಗಳು ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಪಸರಿಸಿ ಆತಂಕ ಹುಟ್ಟಿಸಿದವು. ಪೆಟ್ರೋಲ್, ಡೀಸೆಲ್ ಈ ವರ್ಷ ಪೆಟ್ರೋಲ್, ಡೀಸೆಲ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು. ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ 90 ರು. ಗಡಿ ದಾಟಿ ಹೆದರಿಕೆ ಹುಟ್ಟಿಸಿತು. ವರ್ಷಾಂತ್ಯಕ್ಕೆ ಇಳಿಕೆಯಾಯಿತು. 
 

Follow Us:
Download App:
  • android
  • ios