ಪಣಜಿ, (ಫೆ.12): ಗೋವಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿದ್ದು, ತಪಾಸಣೆ ವೇಳೆ ಮಹಿಳೆ ಪ್ಯಾಂಟ್ ನಲ್ಲಿ ಸಿಕ್ಕ ವಸ್ತು ನೋಡಿ ಅಧಿಕಾರಿಗಳು ದಂಗಾಗಿದ್ದಾರೆ.

 ಸೋಮವಾರ  ಮಹಿಳೆಯೊಬ್ಬರು ದುಬೈನಿಂದ ಗೋವಾಕ್ಕೆ ಬಂದಿಳಿದಿದ್ದಾರೆ. ಆದ್ರೆ ವಿಮಾನ ನಿಲ್ದಾಣದಲ್ಲಿ ಮಹಿಳೆಯ ವರ್ತನೆಯಿಂದ ಅನುಮಾನಗೊಂಡ ಕಸ್ಟಮ್ ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ.

ಈ ವೇಳೆ  590 ಗ್ರಾಂ ಚಿನ್ನವನ್ನು ಪೇಸ್ಟ್ ರೀತಿ ಮಾಡಿ ಪಾಲಿಥಿನ್ ಪ್ಯಾಕೆಟ್ ನಲ್ಲಿ ಹಾಕಿ ಜೀನ್ಸ್ ನ ಜೇಬಿನಲ್ಲಿ ಅಡಗಿಸಿಕೊಂಡಿರುವುದು ಸಿಕ್ಕಿದೆ. ಇದನ್ನು ನೋಡಿ ಅಧಿಕಾರಿಗಳು ಹೌಹಾರಿದ್ದಾರೆ.

ಗೋವಾ ವಿಮಾನ ನಿಲ್ದಾಣದಲ್ಲಿ ಸಿಕ್ಕ ಈ ಚಿನ್ನದ ಬೆಲೆ 18 ಲಕ್ಷ 840 ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ.