ಪಣಜಿ, (ನ.05) : ತಮ್ಮ ವಿರುದ್ಧ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ಸಾಮೂಹಿಕ ಅತ್ಯಾಚಾರ ಮಾಡಿಸುವುದಾಗಿ ಬಿಜೆಪಿ ನಾಯಕ ಬೆದರಿಕೆ ಒಡ್ಡಿದ್ದಾರೆ ಎಂದು ಗೋವಾ ಕಾಂಗ್ರೆಸ್ ಕಾರ್ಯಕರ್ತೆ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಮುಖಂಡ ಸುಭಾಶ್ ಶಿರೋಡ್ಕರ್ ಅವರು ಸಾಮೂಹಿಕ ಅತ್ಯಾಚಾರ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ದಿಶಾ ಶೆಟ್ಕರ್ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಭಾನುವಾರ ಸುಭಾಶ್ ಶಿರೋಡ್ಕರ್ ಬೆಂಬಲಿಗ ಅಂತ ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ತಮಗೆ ಕರೆ ಮಾಡಿದ್ದರು. ತಮ್ಮ ಮೇಲೆ  ಸಾಮೂಹಿಕ ಮಾಡಿಸುವುದಾಗಿ ಅತ್ಯಂಕ ಕೀಳು ಮಟ್ಟದ ಭಾಷೆಯನ್ನು ಪ್ರಯೋಗಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. 

 ಒಬ್ಬ ಮಹಿಳೆಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಸುಭಾಶ್ ಶಿರೋಡ್ಕರ್ ಮತ್ತು ಅವರ ಬೆಂಬಲಿಗರು ಇಷ್ಟು ಕೀಳು ಮಟ್ಟದ ಹಂತಕ್ಕೆ ಇಳಿದಿದ್ದಾರೆ ಎಂದು ದಿಯಾ ಶೆಟ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗೋವಾದ ಶಿರೋಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುಭಾಶ್ ಶಿರೋಡ್ಕರ್ ಅವರು ಕಾಂಗ್ರೆಸ್ ತೊರೆದು ಕಳೆದ ಅಕ್ಟೋಬರ್ ನಲ್ಲಿ ಬಿಜೆಪಿ ಸೇರಿದ್ದರು.