ಬೆಂಗಳೂರು[ಡಿ.09]  ಗೋ ಮಾಂಸ ಭಕ್ಷಣೆ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ ಅವರಿಗೆ ಬೆದರಿಕೆ ಕರೆ ಬಂದಿದೆ. ಬಿಜೆಪಿ ಸರ್ಕಾರವಿರುವ ಗೋವಾ ರಾಜ್ಯದಲ್ಲಿ ಬೀಫ್ ತಿಂದು ಸೆಲಬ್ರೇಟ್ ಮಾಡ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದ ಗುಹಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದರು.

ಗುಹಾ ಟ್ವೀಟ್ಗೆ ಹಲವರಿಂದ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಕೆಲವರು ಗುಹಾ ಮತ್ತು ಅವರ ಪತ್ನಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿದ್ದ ಗುಹಾ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದರು.

ಕಮೀಷನರ್ ಸೂಚನೆ ಮೇರೆಗೆ ಹಲಸೂರಿನ ಬರ್ಟನ್ ರಸ್ತೆಯ ಗುಹಾ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಸದ್ಯ ರಾಮಚಂದ್ರ ಗುಹಾ ಬೆಂಗಳೂರಿನಲ್ಲಿಲ್ಲ . ಕಳೆದ 3 ದಿನಗಳ ಹಿಂದೆ ಮಾಡಿದ್ದ ಟ್ವೀಟ್ ನಂತರ ಇಷ್ಟೆಲ್ಲಾ ಘಟನೆ ನಡೆದಿದೆ.