ನವದೆಹಲಿ[ನ. 01]  ಈ ಯುವತಿ  ತನ್ನ ತಾಯಿಗೆ ಗಂಡು ಹುಡುಕುತ್ತಿದ್ದಾಳೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ  ಬರೆದುಕೊಂಡಿದ್ದು ಹಲವಾರು ಜನ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಆಸ್ತಾ ವರ್ಮಾ ಎಂಬ ಯುವತಿ ತನ್ನ ತಾಯಿಗೆ ಸೂಕ್ತ ವರನನ್ನು ಶೋಧಿಸುತ್ತಿದ್ದಾಳೆ. ಇವರು ತಮ್ಮ ಟ್ವಿಟರ್​ ಖಾತೆಯಲ್ಲಿ, ನನ್ನ ತಾಯಿಗಾಗಿ 50 ವರ್ಷದ ಅತ್ಯಾಕರ್ಷಕ ವರ ಬೇಕಾಗಿದ್ದಾರೆ!  ಸಸ್ಯಹಾರಿಯಾಗಿದ್ದು, ಮದ್ಯವ್ಯಸನಿಯಲ್ಲದ, ಜೀವನದಲ್ಲಿ ಚೆನ್ನಾಗಿ ನೆಲೆಗೊಂಡಿರುವವರು ಅರ್ಜಿ ಹಾಕಬಹುದು ಎಂದು ಬರೆದುಕೊಂಡಿದ್ದಾರೆ.

ಆಸ್ತಾ ವರ್ಮಾ ಅವರಿಗೆ ಸಲಹೆಗಳು ಬಂದಿವೆ. ಇದಕ್ಕೆ ಪ್ರತಿ ಉತ್ತರ ನೀಡಿರುವ ಆಸ್ತಾ ವರ್ಮಾ, ಅಲ್ಲೆಲ್ಲ ಸಾಕಷ್ಟು ಹುಡುಕಾಡಿದೆ. ಆದರೆ ಅದರಿಂದ ಪ್ರಯೋಜನವಾಗಲಿಲ್ಲ ಹಾಗಾಗಿ ಇಲ್ಲಿಯೂ ಮಾಹಿತಿ ಹಂಚಿಕೊಂಡಿದ್ದೇನೆ ಎಂದಿದ್ದಾರೆ.

ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು 21 ಸಾವಿರಕ್ಕೂ ಅಧಿಕ ಲೈಕ್​ಗಳು ಸಿಕ್ಕಿದೆ. 4,600 ಸಾರಿ ರಿಟ್ವೀಟ್ ಆಗಿದೆ. ಏನೇ ಆಗಲಿ ಆ ತಾಯಿಗೊಂದು ಉತ್ತಮ ವರ ಸಿಗಲಿ..ಮಗಳ ಪ್ರಯತ್ನ ಯಶ ಕಾಣಲಿ ಎಂದು ಹಾರೈಸೋಣ.

ಒಂದು ಗಂಡು ಮತ್ತು ಹೆಣ್ಣು ಹುಡುಕಿ ಮದುವೆಯಾಗುವುದು ಆಧುನಿಕ ಜಗತ್ತಿನಲ್ಲಿಸುಲಭದ ಕೆಲಸ ಏನಲ್ಲ.  ಈ ಎಲ್ಲದರ ನಡುವೆ ಯುವತಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾಳೆ. ಅವಳಿಗೆ ಮತ್ತೊಮ್ಮೆ ಗುಡ್ ಲಕ್  ಹೇಳಿಬಿಡೋಣ