ಘೋರ ದುರಂತ..ಪ್ರತಿಯೊಬ್ಬ ಪೋಷಕರು ಈ ಸುದ್ದಿ ಓದಲೇಬೇಕು

First Published 22, Jun 2018, 9:05 PM IST
Girl, six, is led away to be raped and murdered by killer
Highlights

ಪ್ರತಿಯೊಬ್ಬ ಪೋಷಕರು ಈ ಸುದ್ದಿಯನ್ನು ಓದಲೇ ಬೇಕು. ಮದುವೆ ಮತ್ತಿತರ ಸಮಾಂಭಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವ ಪಾಲಕರಿಗೆ ಈ ಸುದ್ದಿ ಎಚ್ಚರಿಕೆ ಘಂಟೆಯಾಗಿದೆ.

ಗ್ವಾಲಿಯರ್ [ಜೂ.22] ಪ್ರತಿಯೊಬ್ಬ ಪೋಷಕರು ಈ ಸುದ್ದಿಯನ್ನು ಓದಲೇ ಬೇಕು. ಮದುವೆ ಮತ್ತಿತರ ಸಮಾಂಭಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವ ಪಾಲಕರಿಗೆ ಈ ಸುದ್ದಿ ಎಚ್ಚರಿಕೆ ಘಂಟೆಯಾಗಿದೆ.

ಗ್ವಾಲಿಯರ್ ನ ಬಳಿ ಇಂಥದ್ದೊಂದು ಅಮಾನವೀಯ ಪ್ರಕರನ ನಡೆದಿದ್ದು ಸಿಸಿಟಿವಿ ದೃಶ್ಯಗಳು ಘೋರ ದುರಂತದ ಕತೆ ಹೇಳುತ್ತಿವೆ. ಮದುವೆಗೆ ತೆರಳಿದ್ದ ಪಾಲಕರು 6 ವರ್ಷದ ಮಗುವನ್ನು ತಮ್ಮ ಜತೆಗೆ ಕರೆದೊಯ್ದಿದ್ದರು.  ಪಾಲಕರ ಗಮನ ಬೇರೆಡೆ ಇದ್ದಾಗ ಮಗುವಿಗೆ ಯಾವುದೋ ಆಮಿಷ ತೋರಿಸಿ ಆಗಂತುಕನೊಬ್ಬ ತನ್ನ ಜತೆಗೆ ಮಗುವನ್ನು ಕರೆದೊಯ್ದಿದ್ದಾನೆ.

ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕಲ್ಲಿನಿಂದ ಮಗುವಿನ ಮುಖವನ್ನು ಜಜ್ಜಿ ಹತ್ಯೆ ಮಾಡಿದ್ದಾನೆ. ಘಟನೆ ಮರುದಿನ ಗೊತ್ತಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಮಗುವಿನ ಪೋಸ್ಟ್ ಮಾರ್ಟಮ್ ಸಹ ಅತ್ಯಾಚಾರದ ಕತೆ ಹೇಳುತ್ತಿದ್ದು ಮದುವೆಯ ಅಡುಗೆ ಜವಾಬ್ದಾರಿ ವಹಿಸಿಕೊಂಡಿದ್ದ ತಂಡದವರಿಂದ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

loader