Asianet Suvarna News Asianet Suvarna News

ಪ್ರೇಮಕ್ಕೆ ಅಡ್ಡಿಯಾದ ತಮ್ಮನನ್ನು ಕೊಂದ ಅಕ್ಕ!

ಬಾಯ್‌ಫ್ರೆಂಡ್ ಜೊತೆ ಇರಲು ಬಿಡದ ತಮ್ಮನನ್ನು ಕೊಂದ ಸಹೋದರಿ! ಬಾಯ್‌ಫ್ರೆಂಡ್ ಇರೋ ವಿಷಯ ಮನೆಯಲ್ಲಿ ಹೇಳಿದ್ದಕ್ಕೆ ಕತ್ತು ಸೀಳಿ ಕೊಲೆ! ಪಂಜಾಬ್‌ನ ಲುಧಿಯಾನಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ! ತನ್ನನ್ನು ಹಿಂಬಾಲಿಸುತ್ತಿದ್ದ ಸಹೋದರನನ್ನು ಕೊಲೆ ಮಾಡಿದ ಪಾಪಿ
 

Girl Kills her brother for revealing about her boyfriend to parents
Author
Bengaluru, First Published Oct 12, 2018, 6:02 PM IST

ಲುಧಿಯಾನ(ಅ.12): ತನಗೆ ಬಾಯ್‌ಫ್ರೆಂಡ್ ಇರುವ ವಿಚಾರವನ್ನು ಪೋಷಕರಿಗೆ ತಿಳಿಸಿದ ಎಂಬ ಕಾರಣಕ್ಕೆ ಯುವತಿಯೋರ್ವಳು ತನ್ನ 4 ವರ್ಷದ ಸಹೋದರನನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಅನ್ಶ್ ಹತ್ಯೆಯಾದ ಬಾಲಕನಾಗಿದ್ದು, 19 ವರ್ಷದ ರೇಣು ಕನೌಜಿಯಾ ಬಾಲಕನನ್ನು ಹತ್ಯೆ ಮಾಡಿದ ಸಹೋದರಿ ಎಂದು ಗುರುತಿಸಲಾಗಿದೆ. 

ಪ್ರೀತಿಗೆ ಸಹೋದರ ಅನ್ಶ್ ಅಡ್ಡಿಯಾಗಿದ್ದ. ಮನೆಯಿಂದ ಹೊರಗೆ ಹೋದಾಗಲೆಲ್ಲಾ ನನ್ನನ್ನು ಹಿಂಬಾಲಿಸುತ್ತಿದ್ದ. ಇದರಂತೆ ಒಂದು ದಿನ ನನ್ನ ಬಾಯ್'ಫ್ರೆಂಡ್ ಜೊತೆಗಿದುದ್ದನ್ನು ಆತ ನೋಡಿ ಪೋಷಕರಿಗೆ ಹೇಳಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಿದ್ದಾಗಿ ರೇಣು ಹೇಳಿದ್ದಾಳೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅ.6 ರಂದು ಸಹೋದರನ ಕತ್ತು ಸೀಳಿ ಹತ್ಯೆ ಮಾಡಿದ್ದಾಗಿ ರೇಣು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 
 

Follow Us:
Download App:
  • android
  • ios