Asianet Suvarna News Asianet Suvarna News

ಮಗಳೊಂದಿಗೆ ಇದ್ದವನ ಜನನಾಂಗವನ್ನೇ ಕತ್ತರಿಸಿದ ತಂದೆ

ಮರ್ಯಾದಾ ಹತ್ಯೆ ಪ್ರಕರಣಗಳು ದೇಶದಲ್ಲಿ ಸುದ್ದಿ ಮಾಡುತ್ತಿರುವಾಗಲೇ ಮತ್ತೊಂದು ಅಮಾನವೀಯ ಪ್ರಕರಣವೂ ನಡೆದು ಹೋಗಿದೆ. ಪುತ್ರಿಯೊಂದಿಗೆ ಅಸಹಜ ಸ್ಥಿತಿಯಲ್ಲಿದ್ದ ಬಾಲಕನ ಮೇಲೆ ಹಲ್ಲೆ ಮಾಡಿ ಆತನ ಜನನಾಂಗವನ್ನೇ ಕತ್ತರಿಸಿ ಹಾಕಲಾಗಿದೆ.

Girl family bobbitises her boyfriend in Uttar Pradesh Gorakhpur
Author
Bengaluru, First Published Sep 20, 2018, 5:36 PM IST
  • Facebook
  • Twitter
  • Whatsapp

ಗೋರಖ್ ಪುರ(ಸೆ.20) ತಂದೆ ಮತ್ತು ಆತನ ಇಬ್ಬರು ಮಕ್ಕಳು ಸೇರಿ ಬಾಲಕನ ಮೇಲೆ ಅಮಾನವೀಯ ಹಲ್ಲೆ ನಡೆಸಿದ್ದಾರೆ. 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಮೇಲೆ ಹಲ್ಲೆ ಮಾಡಿದ ಬಾಲಕಿಯ ತಂದೆ ಗುಡ್ಡು ನಿಶಾದ್ ರನ್ನು ಬಂಧಿಸಲಾಗಿದೆ.

ಖಜಿನಿಯಲ್ಲಿ ಪ್ರಕರಣ ನಡೆದಿದ್ದು 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಪ್ ಚಂದ್ ಗುಪ್ತಾ ತನ್ನ ಜನನಾಂಗ ಕಲೆದುಕೊಂಡಿದ್ದಾನೆ. ಹೆಚ್ಚಿನ ಚಿಕಿತ್ಸೆಗೆಂದು ಬಾಲಕನನ್ನು ಲಕನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ತಂದೆ ಮನೆಗೆ ಬಂದಾಗ ಬಾಲಕ ಮಗಳೊಂದಿಗೆ ಅಸಹಜ ಸ್ಥಿತಿಯಲ್ಲಿದ್ದ. ಇದೇ ಕಾರಣಕ್ಕೆ ಕುಪಿತಗೊಂಡ ತಂದೆ ತನ್ನ ಮಕ್ಕಳೊಂದಿಗೆ ಸೇರಿ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.

Follow Us:
Download App:
  • android
  • ios