Asianet Suvarna News Asianet Suvarna News

ಗೌರಿ ಹತ್ಯೆ ಪ್ರಕರಣ: ಹಿಂದೂಪರ ಕಾರ್ಯಕರ್ತರಿಗೆ ನೋಟಿಸ್

ರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರಿಂದ ಹಿಂದೂಪರ ಕಾರ್ಯಕರ್ತರಿಗೆ ನೋಟಿಸ್.

Gauri Lankesh murder: SIT issues notices to 6 pro-hindu activists from Belagavi
Author
Bengaluru, First Published Oct 1, 2018, 2:40 PM IST
  • Facebook
  • Twitter
  • Whatsapp

ಬೆಂಗಳೂರು, (ಅ.1): ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಹಿಂದೂ ಪರ ಕಾರ್ಯಕರ್ತರಿಗೆ ನೋಟಿಸ್ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯ ಒಟ್ಟು ಆರು ಹಿಂದೂಪರ ಸಂಘಟನೆ ಕಾರ್ಯಕರ್ತರಿಗೆ ಇದೇ ಅಕ್ಟೋಬರ್ 8ರೊಳಗೆ ವಿಚಾರಣೆಗೆ ಬರುವಂತೆ ಎಸ್ ಐಟಿ ನೋಟಿಸ್ ನೀಡಿದೆ.

ಇದೇ ಪ್ರಕರಣದಲ್ಲಿ ಬೆಳಗಾವಿ ಮೂಲದ ಭರತ್ ಕುರ್ಣೆ ಎನ್ನುವರನ್ನು ಎಸ್ ಐಟಿ ತಂಡ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

ಮತ್ತೊಂದೆಡೆ ಗೌರಿ ಲಂಕೇಶ್ ಹತ್ಯೆ ಕೃತ್ಯ ಒಪ್ಪಿಕೊಳ್ಳಲು ಎಸ್ಐಟಿ ಪೊಲೀಸರು ಹಣದ ಆಮಿಷವೊಡ್ಡಿದ್ದಾರೆ. ಅಷ್ಟೇ ಅಲ್ಲದೇ ಚಿತ್ರಹಿಂಸೆ ನೀಡಿದ್ದಾರೆ ಎಂದು ಪರಶುರಾಮ ವಾಘ್ಮೋರೆ ಗಂಭೀರ ಆರೋಪ ಮಾಡಿದ್ದಾರೆ.

Follow Us:
Download App:
  • android
  • ios