ಇದು #ನಮ್ಮಚುನಾವಣೆ ಫುಲ್ ಡೀಟೇಲ್ಸ್..

Full details of Karnataka Assembly election
Highlights

ನಮ್ಮ ರಾಜ್ಯದ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ, ಎಲ್ಲ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿವೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ, ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ.

ಬೆಂಗಳೂರು: ನಮ್ಮ ರಾಜ್ಯದ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ, ಎಲ್ಲ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿವೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ, ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ.

ಇದು ರಾಜ್ಯ ಚುನಾವಣೆಯ ಫುಲ್ ಡಿಟೇಲ್ಸ್..
- ಮೇ 12ರಂದು ಮತದಾನ ಹಾಗೂ ಮೇ 15ರಂದು ಚುನಾವಣಾ ಫಲಿತಾಂಶ ಪ್ರಕಟ

- ಒಂದೇ ಹಂತದಲ್ಲಿ ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಫಿಕ್ಸ್
- 224 ಕ್ಷೇತ್ರಗಳ ಪೈಕಿ ಒಟ್ಟು 36 ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲು
- 224 ಕ್ಷೇತ್ರಗಳ ಪೈಕಿ ಒಟ್ಟು 15 ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲು
- ಕರ್ನಾಟಕ ರಾಜ್ಯದಲ್ಲಿ ಒಟ್ಟು 4 ಕೋಟಿ 96 ಲಕ್ಷ 82 ಸಾವಿರದ 357 ಮತದಾರರು
- ಮೇ 12ರ ಮತದಾನ ದಿನಕ್ಕೆ ಒಂದು ವಾರ ಮುಂಚೆ ವೋಟರ್ ಸ್ಲಿಪ್ ಗಳ ವಿತರಣೆ
- ಮತದಾರನ ಭಾವ ಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿಗಳ ವಿತರಣೆ
- ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಒಟ್ಟು 56,696 ಮತಗಟ್ಟೆಗಳ ಸ್ಥಾಪನೆ
- ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಮಹಿಳಾ ಕೇಂದ್ರಿತ ಮತಗಟ್ಟೆ ಸ್ಥಾಪನೆ
- ಮಹಿಳಾ ಕೇಂದ್ರಿತ ಮತಗಟ್ಟೆಯಲ್ಲಿ ಎಲ್ಲ ಮಹಿಳಾ ಸಿಬ್ಬಂದಿ ನಿಯೋಜನೆ
- ಪೊಲೀಸ್, ಭದ್ರತಾ ಸಿಬ್ಬಂದಿ ಎಲ್ಲರೂ ಸಹ ಮಹಿಳೆಯರನ್ನೇ ನಿಯೋಜನೆ ನಿರ್ಧಾರ
- ವಿದ್ಯುನ್ಮಾನ ಮತ ಯಂತ್ರಗಳ ಜತೆಗೆ ವಿವಿಪ್ಯಾಟ್ ಉಪಕರಣಗಳ ವ್ಯವಸ್ಥೆ ನಿರ್ಧಾರ
- VVPAT - ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ ಉಪಕರಣಗಳು
- ನೋಟಾ ಮತ ಹಾಕಲು ಅನುಕೂಲವಾಗುಂತೆ ನೋಟಾ ಮತಗಳಿಗೆ ಪ್ರತ್ಯೇಕ ಚಿಹ್ನೆ
- NOTA - ನನ್ ಆಫ್ ದಿ ಎಬವ್ - ಅಂದರೆ ಮೇಲಿನ ಯಾರಿಗೂ ಮತ ಹಾಕುವುದಿಲ್ಲ
- ಮತ ಯಂತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರುಗಳ ಕೊನೆಯಲ್ಲಿ NOTA ಬಟನ್ ವ್ಯವಸ್ಥೆ
- ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಫೋಟೋ ಪ್ರಕಟಿಸುವ ವ್ಯವಸ್ಥೆ

loader