Asianet Suvarna News Asianet Suvarna News

ವೀರ್ ಸಾವರ್ಕರ್‌ಗೆ ಅವಮಾನ- ರಾಹುಲ್ ಗಾಂಧಿ ವಿರುದ್ಧ ದೂರು!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಮೊಮ್ಮಗ ಈ ಬಾರಿ ರಾಹುಲ್ ಗಾಂಧಿ ವಿರುದ್ಧ ತೊಡೆ ತಟ್ಟಿದ್ದಾರೆ. ಅಷ್ಟಕ್ಕೂ ಸಾವರ್ಕರ್ ಮೊಮ್ಮಗ, ರಾಹುಲ್ ಗಾಂಧಿ ದೂರು ದಾಖಲಿಸಿದ್ದೇಕೆ? ಇಲ್ಲಿದೆ ವಿವರ.

Freedom fighter Savarkar grandnephew files complaint against Rahul Gandhi
Author
Bengaluru, First Published Nov 15, 2018, 6:18 PM IST

ಮುಂಬೈ(ನ.15): ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್‌ಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ. ವೀರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 ಛತ್ತೀಸ್‌ಘಡದ ಚುನಾವಣಾ ಪ್ರಚಾರದ ವೇಲೆ ರಾಹುಲ್ ಗಾಂಧಿ, ಬ್ರಿಟೀಷರ ಮುಂದೆ ಕ್ಷಮೆ ಕೋರಿ ಸ್ವಾತಂತ್ರ ಹೋರಾಟಗಾರ ವೀರ್ ಸಾವರ್ಕರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದುಹೇಳಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ ಎಂದು ಸಾವರ್ಕರ್ ಮೊಮ್ಮಗ ರಂಜಿತ್ ದೂರು ದಾಖಲಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ  ಭಾಗಿಯಾಗಿದೆ. ನಮ್ಮ ಅನೇಕ ನಾಯಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದಿದ್ದಾರೆ. ಹೀಗಾಗಿ ಇತರರಿಂದ ದೇಶಭಕ್ತಿ ಪಾಠ ಕೇಳಬೇಕಿಲ್ಲ. ನಮ್ಮ ನಾಯಕರು 15 ರಿಂದ 20 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಆದರೆ ಬಿಜೆಪಿ ಬ್ರಾಂಡ್ ಐಕಾನ್ ವೀರ್ ಸಾವರ್ಕರ್ ಜೈಲಿನಿಂದ ಬಿಡುಗಡೆಗಾಗಿ ಬ್ರಿಟೀಷರಲ್ಲಿ ಕ್ಷಮೆ ಕೇಳಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ ಎಂದು ರಂಜಿತ್ ಸಾವರ್ಕರ್ ಆರೋಪಿಸಿದ್ದಾರೆ. 

 

 

ವೀರ್ ಸಾವರ್ಕರ್ 27 ವರ್ಷ ಜೈಲಿನಲ್ಲಿದ್ದರು. ಆದರೆ  ಇತಿಹಾಸ ತಿಳಿಯದ ರಾಹುಲ್ ಗಾಂಧಿ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ ಎಂದು ರಂಜಿತ್ ಸಾವರ್ಕರ್ ಹೇಳಿದ್ದಾರೆ.  

Follow Us:
Download App:
  • android
  • ios