ರಾಜಸ್ಥಾನದ ಮರಳುಗಾಡಲ್ಲಿ ಹಿಂದೆ ಸಮುದ್ರ: ಸಂಶೋಧನೆ!

Fossils Indicate Rajasthan's Desert Was Underwater 47 Million Years Ago
Highlights

ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ 

ರಾಜಸ್ಥಾನದ ಮರಳುಗಾಡಲ್ಲಿ ಹಿಂದೆ ಸಮುದ್ರ

ತಿಮಿಂಗಲು, ಶಾರ್ಕ್, ಮೊಸಳೆ ಪಳಿಯುಳಿಕೆ ಪತ್ತೆ

ಪೂರ್ವ-ಐತಿಹಾಸಿಕ ಯುಗದಲ್ಲಿ ಸಮುದ್ರ

ಮಧ್ಯಮ ಈಯಸೀನ್ ಅವಧಿಯ ಸಮುದ್ರದ ಪಳೆಯುಳಿಕೆಗಳು

ಜೈಪುರ್(ಜು.13): ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಮರುಭೂಮಿಗಳಲ್ಲಿ, ಪುರಾತತ್ತ್ವ ಶಾಸ್ತ್ರಜ್ಞರು ಪ್ರಾಚೀನ ತಿಮಿಂಗಲು, ಶಾರ್ಕ್ ಹಲ್ಲುಗಳು, ಮೊಸಳೆ ಹಲ್ಲುಗಳು ಮತ್ತು ಆಮೆ ಎಲುಬುಗಳ ಸುಮಾರು 47 ದಶಲಕ್ಷ ವರ್ಷಗಳಷ್ಟು ಹಳೆಯ ಪಳೆಯುಳಿಕೆಗಳನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರದೇಶವು ಪೂರ್ವ-ಐತಿಹಾಸಿಕ ಯುಗದಲ್ಲಿ ಸಮುದ್ರದ ಅಡಿಯಲ್ಲಿತ್ತು ಎಂಬ ವಾದಕ್ಕೆ ಇದೀಗ ಪುಷ್ಠಿ ದೊರೆತಿದೆ. 

ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಗುಜರಾತ್ ಮತ್ತು ರಾಜಸ್ಥಾನದ ವಿವಿಧ ಭಾಗಗಳಲ್ಲಿ ಪಳೆಯುಳಿಕೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ತಿಮಿಂಗಿಲ, ಶಾರ್ಕ್ ಹಲ್ಲುಗಳು, ಮೊಸಳೆ ಹಲ್ಲುಗಳು ಮತ್ತು ಮಧ್ಯಮ ಈಯಸೀನ್ ಯುಗಕ್ಕೆ ಸೇರಿದ ಆಮೆ ​​ಮೂಳೆಗಳಂತ ಕಶೇರುಕಗಳ ಹಲವಾರು ಪಳೆಯುಳಿಕೆಗಳು ಜೈಸಲ್ಮೇರ್ ನ ಬಂಡಾ ಗ್ರಾಮದಿಂದ ಹೊರತೆಗೆದಿದ್ದಾರೆ.

ಹಿರಿಯ ಭೂವಿಜ್ಞಾನಿಗಳಾದ ಕೃಷ್ಣ ಕುಮಾರ್ ಮತ್ತು ಪ್ರಜ್ಞಾ ಪಾಂಡೆ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದ್ದು, ಪ್ಯಾಲಯೊಂಟೊಲಜಿ ವಿಭಾಗದ ನಿರ್ದೇಶಕ ದೇಬಶಿಶ್ ಭಟ್ಟಾಚಾರ್ಯ ಅವರ ಮೇಲ್ವಿಚಾರಣೆಯಲ್ಲಿ ಯಶಸ್ವಿ ಸಂಶೋಧನೆ ನಡೆಸಲಾಗಿದೆ. ಮಧ್ಯಮ ಈಯಸೀನ್ ಅವಧಿಯ ಸಮುದ್ರದ ಪಳೆಯುಳಿಕೆಗಳು 47 ದಶಲಕ್ಷ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಒಂದು ಸಮುದ್ರವಿದೆ ಎಂದು ಸೂಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

loader