Asianet Suvarna News Asianet Suvarna News

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಲೀಗೆ 15 ವರ್ಷ ಜೈಲು, 85 ಕೋಟಿ ದಂಡ

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಲೀ ಮಯೂಂಗ್‌ ಬಕ್‌ ಅವರಿಗೆ 15 ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ. 

Former South Korean President Gets 15 Year  In Prison For Corruption
Author
Bengaluru, First Published Oct 6, 2018, 10:58 AM IST
  • Facebook
  • Twitter
  • Whatsapp

ಸೋಲ್‌(ದಕ್ಷಿಣ ಕೊರಿಯಾ): ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಲೀ ಮಯೂಂಗ್‌ ಬಕ್‌ ಅವರಿಗೆ 15 ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ.

2008ರಿಂದ 2013ರವರೆಗೂ ಅಧ್ಯಕ್ಷರಾಗಿ ದಕ್ಷಿಣ ಕೊರಿಯಾ ಅಧ್ಯಕ್ಷರಾಗಿದ್ದ ಲೀ ವಿರುದ್ಧದ ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಮತ್ತು ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಸಾಬೀತಾಗಿದೆ. 

ಈ ಹಿನ್ನೆಲೆಯಲ್ಲಿ ಸೋಲ್‌ನಲ್ಲಿರುವ ನ್ಯಾಯಾಲಯವು, ಲೀಗೆ 85 ಕೋಟಿ ರು. ದಂಡ ಮತ್ತು 15 ವರ್ಷ ಜೈಲು ಶಿಕ್ಷೆಯನ್ನು ಸಹ ವಿಧಿಸಿ ಆದೇಶಿಸಿದೆ.

Follow Us:
Download App:
  • android
  • ios