ನವದೆಹಲಿ[ಫೆ.08]  ನಾನು ಧರ್ಮಸ್ಥಳಕ್ಕೆ ಹೋಗಬೇಕಿತ್ತು. ಆ ಕಾರ್ಯಕ್ರಮವನ್ನು ರದ್ದು ಮಾಡಿ ರಾಷ್ಟ್ರಪತಿ ಭಾಷಣ ಮತ್ತು ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತಾನಾಡಬೇಕು ಎಂಬ ಕಾರಣದಿಂದ ದೆಹಲಿಯಲ್ಲೇ ಉಳಿದುಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ರೈತನ ಮಗನಾಗಿ ಹುಟ್ಟಿದ್ದೇನೆ. ರೈತನ‌ ಮಗನಾಗಿಯೇ ಸಾಯುತ್ತೇನೆ.‌ ನಾನು ನೋವು ಉಂಡಿದ್ದೇನೆ. ಇದೇ ಕೊನೆಯ ಭಾಷಣ ಆಗಬಹುದು. ನನಗೆ ಮಾತಾನಾಡಲು ಹೆಚ್ಚಿನ ಅವಕಾಶ ನೀಡಿ ಎಂದೆ.‌ ಸ್ಪೀಕರ್ ನಾಲ್ಕು ಗಂಟೆಗೆ ಸಮಯ ಹೇಳಿದ್ದರು. ನಾನು 10 ನಿಮಿಷ ಮೊದಲೇ ಇದ್ದೆ. ಮುನಿಯಪ್ಪ ಮತ್ತು ಸ್ಪೀಕರ್ ಇದ್ದರು ಎಂದು ಹೇಳಿದರು.

ನಾನು ದೇಶದ ಪ್ರಧಾನಿಯಾಗಿ 320 ದಿನ ಕೆಲಸ ಮಾಡಿದ್ದೇನೆ.  ಆದರೆ 5 ನಿಮಿಷದಲ್ಲಿ ಭಾಷಣಕ್ಕೆ ತಡೆ ನೀಡುವ ಪ್ರಯತ್ನ ಮಾಡಿದ್ದಾರೆ. ನನಗೆ ಮಣ್ಣಿನ‌ ಮಗ ಬಿರುದು ಯಾಕೆ ಕೊಟ್ಟರು ಎಂದು ಗೊತ್ತಿಲ್ಲ.‌ ಆದರೆ ಪ್ರಧಾನಿಗಳ ಟೀಕೆ ನನಗೆ ನೋವು ತಂದಿದೆ ಎಂದರು.

ಎಲ್ಲರಿಗೂ ತುಂಬಾ ಇಂಪಾರ್ಟೆಂಟ್: ಇದು ಟ್ಯಾಕ್ಸ್ ವಿನಾಯ್ತಿಯ ಬಜೆಟ್!

ಇವತ್ತು ಬಜೆಟ್ ಬಗ್ಗೆ ಮಾತಾನಾಡಬೇಕು ಎಂದು ಎರಡು ದಿನಗಳಿಂದ ತಯಾರಿ ನಡೆಸಿದ್ದೇನೆ. ರಾಜ್ಯದಲ್ಲಿ ರೈತರ ಸಾಲ ಮನ್ನಾದ ಯೋಜನೆ ಬಗ್ಗೆ ಪ್ರಧಾನಿಗಳು ಸುಮ್ಮನೆ ಆರೋಪ‌ ಮಾಡುತ್ತಿದ್ದಾರೆ.  ರಫೆಲ್‌ ನಲ್ಲಿ ಪ್ರಧಾನಿಗಳ ಮೇಲೆ ಆರೋಪ‌ ಇರುವಾಗ ಅವರು ಸ್ಪಷ್ಟಿಕರಣ ನೀಡಬೇಕು ಎಂದು ಗೌಡರು ಹೇಳಿದರು.

ಬಜೆಟ್ ಮೇಲೆ ಮಾತಾನಾಡಲು ನನಗೆ ಹೆಚ್ಚಿನ ಸಮಯ ನೀಡಿ. ಏಕೆಂದರೆ ರಾಷ್ಟ್ರಪತಿ  ಭಾಷಣದ ಮೇಲೆ ಹೆಚ್ಚು ಮಾತನಾಡಲು ಅವಕಾಶ ಸಿಕ್ಕಿಲ್ಲ.  ನನಗೆ ಇವತ್ತು ಮನಸ್ಸಿಗೆ ನೋವಾಗಿದೆ.  ನನ್ನ ಸಾರ್ವಜನಿಕ‌ ಜೀವನದಲ್ಲಿ ಯಾವಾತ್ತೂ ತಾಳ್ಮೆ ಕಳೆದುಕೊಂಡಿಲ್ಲ. ಆದರೆ ನನ್ನನ್ನು ಗಮನಿಸದ ಕಾರಣ ತಾಳ್ಮೆ ಮೀರಿದ್ದು ನಿಜ. ಸೋಮವಾರ ಮಾತಾನಾಡಲು ಅವಕಾಶ ಸಿಗಬಹುದು ಎಂಬ ವಿಶ್ವಾಸವಿದೆ ಎಂದರು.

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

ಪ್ರಧಾನಿ ಮೋದಿ ನನ್ನ ಕುರಿತಾಗಿ ಮಾಡಿದ ವ್ಯಂಗ್ಯ ಮತ್ತು ಸಾಲ ಮನ್ನಾದ  ಬಗೆಗಿನ ಟೀಕೆ ಮನಸ್ಸಿಗೆ ನೋವು ತಂದಿದೆ. ಕರ್ನಾಟಕದ‌ ರಾಜಕಾರಣದ ಬಗ್ಗೆ‌ ನಾನು ಪ್ರತಿಕ್ರಿಯಿಸುವುದಿಲ್ಲ. ರಮೇಶ್ ಕುಮಾರ್ 5 ವರ್ಷ ನಮ್ಮ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದರು. ಅವರ ಬಗ್ಗೆ ಲಘುವಾಗಿ ಮಾತಾನಾಡುವುದಿಲ್ಲ. ಮೋದಿ ಅವರು ಕೂಡ‌ ಸಮ್ಮಿಶ್ರ ಸರ್ಕಾರವನ್ನೆ ನಡೆಸುತ್ತಿದ್ದಾರೆ.  ಕುಮಾರಸ್ವಾಮಿ ಅವರ ಬಜೆಟ್ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.