ನವದೆಹಲಿ, [02]: ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ  ಮಾಜಿ ಸಚಿವ ಎಂಜೆ ಅಕ್ಬರ್ ವಿರುದ್ಧ ಯುಎಸ್ ಮೂಲದ ಪತ್ರಕರ್ತೆ ಪಲ್ಲವಿ ಗೊಗೋಯ್  ಅವರು ಅತ್ಯಾಚಾರ ಆರೋಪ ಮಾಡಿದ್ದಾರೆ.

ಆದರೆ, ಈ ಆರೋಪಗಳೆಲ್ಲಾ ಸುಳ್ಳು ಎಂದು ಮಾಜಿ ಅಕ್ಬರ್​ ಅವರು​ ತಳ್ಳಿಹಾಕಿದ್ದಾರೆ. 1994 ರಲ್ಲಿ ಅವರೊಂದಿಗೆ ಒಮ್ಮತದ ಸಂಬಂಧ ಇತ್ತು ನಿಜ. ಆಕೆಯ ಒಪ್ಪಂದದ ಮೇರೆಗ ನಮ್ಮಿಬ್ಬರ ಸಂಬಂಧ ಹಲವು ತಿಂಗಳ ಕಾಲ ಉತ್ತಮವಾಗಿತ್ತು.

ಸ್ಫೋಟಕ ಸುದ್ದಿ: MeToo ಬಲೆಗೆ ಬಿದ್ದ ಬಿಜೆಪಿ ಮಾಜಿ ಮಿನಿಸ್ಟರ್

ಆದ್ರೆ, ನಂತರ ದಿನಗಳಲ್ಲಿ ನಮ್ಮ ಸಂಬಂಧ ಅತಿರೇಕಕ್ಕೇರಿದ್ದು, ಇದು ನಮ್ಮ ಮನೆಯ ಜೀವನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತ್ತು. ಇದ್ರಿಂದ ನಮ್ಮ ನಡುವಿನ ಉತ್ತಮ ಸಂಬಂಧ ಕೊನೆಯಾಯಿತು ಎಂದು ಎಂಜೆ ಅಕ್ಬರ್ ಸ್ಪಷ್ಟನೆ ನಿಡಿದ್ದಾರೆ.

ಅಕ್ಬರ್ ಅವರು ನನ್ನ ಬಟ್ಟೆ ಹರಿದು ಹಾಕಿ, ನನ್ನ ಮೇಲೆ ಬಲಾತ್ಕಾರ ಮಾಡಿದ್ದರು ಎಂದು ಯುಎಸ್ ಮೂಲದ ಭಾರತೀಯ ಸಂಜಾತೆ ಪತ್ರಕರ್ತೆ ಪಲ್ಲವಿ ಗೊಗಾಯಿ ಅವರು ಆರೋಪಿಸಿದ್ದಾರೆ.