ನವದೆಹಲಿ(ಜ.10)  ಅಜಯ್ ಮಕೇನ್ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ಸ್ಥಾನಕ್ಕೆ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್  ಅವರನ್ನು ಕರೆತರಲಾಗಿದೆ.

ಅಧಿಕೃತ ಮಾಹಿತಿ ಇನ್ನು ಹೊರಬರಬೇಕಿದೆ.  ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿ ನಿಮ್ಮನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಮತ್ತೆ ನೀವು ರಾಜ್ಯ ರಾಜಕಾರಣದಲ್ಲಿ ಪಾತ್ರ ವಹಿಸಲಿದ್ದು ಪಕ್ಷವನ್ನು ಹೊಸ ದಿಕ್ಕಿನೆಡೆಗೆ ಕರೆದುಕೊಂಡಿ ಹೋಗುತ್ತೀರಿ ಎಂದು ಅಜಯ್ ಮಕೇನ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಮೋದಿ ವಿರುದ್ಧ ಗುಡುಗಿದ ರಾಹುಲ್‌ಗೆ ಮಹಿಳಾ ಆಯೋಗದ ನೋಟಿಸ್!

ರಾಹುಲ್ ಗಾಂಧಿಯವರೇ ಖುದ್ದು ಮುಂದೆ ನಿಂತು ಶೀಲಾ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಇಂಥ ಕ್ರಮಕ್ಕೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.