ಇಸ್ಲಮಾಬಾದ್[ಮೇ.08]: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ಮೂಲಕ ನಡೆಸಿದ್ದ ವಾಯುದಾಳಿಯಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ವಿದೇಶಿ ಪತ್ರಕರ್ತರೊಬ್ಬರು ಈ ದಾಳಿಯಲ್ಲಿ ಜೈಷ್ ಸಂಘಟನೆಯ 130 ರಿಂದ 170 ಮಂದಿ ಉಗ್ರರು ಹತರಾಗಿರುವುದಾಗಿ ಹೇಳಿಕೊಂಡಿದ್ದಾರೆ. 

"

ಅಭಿನಂದನ್ ಬಂಧಿಸಿದ್ದ ಪಾಕ್ ಹೆದರಿದ್ದು ಯಾಕೆ?: ಮೋದಿ ಬಿಚ್ಚಿಟ್ಟ ಸೀಕ್ರೆಟ್

ಪರ್ತಕರ್ತೆ ಫ್ರಾನ್ಸೆಸ್ಕೋ ಮೆರಿನೋ ತಮ್ಮ ವರದಿಯಲ್ಲಿ ಇನ್ನೂ ಸುಮಾರು 45 ಮಂದಿ ಶಿಬಿರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಈಗಲೂ ದಾಳಿ ನಡೆದಿದ್ದ ಪ್ರದೇಶವನ್ನು ಸೀಲ್ ಮಾಡಿರುವುದಾಗಿ ಸ್ಥಳೀಯರು ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಉಲ್ಲೇಖಿಸಿದ್ದಾರೆ.