ಟೆಕ್ಸಾಸ್[ಸೆ.28]: ಮೃತ ಅಧಿಕಾರಿಯನ್ನು ಸಂದೀಪ್ ಸಿಂಗ್ ದಾಲೀವಾಲ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷಗಳಿಂದ ಅಮೆರಿಕಾದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಸಂದೀಪ್ ರನ್ನು ಶೂಟ್ ಮಾಡಿದ ವ್ಯಕ್ತಿ, ಬಳಿಕ ಶಾಪಿಂಗ್ ಮಾಲ್ ಕಡೆ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೆರಿಕದ ಪೊಲೀಸರು ಕೊಲೆಗಾರನನ್ನು ಪತ್ತೆ ಹಚ್ಚುವ ಪ್ರಯತ್ನ ಆರಂಭಿಸಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಶೆರಿಫ್ ಈಡ್ 'ಸಂದೀಪ್ ಧನೀವಾಲ್ ಡ್ಯಾಶ್ ಕ್ಯಾಮರಾ ಮೂಲಕ ಆರೋಪಿ ಯಾರೆಂದು ಕಂಡು ಹಿಡಿದಿದ್ದೇವೆ. ಸದ್ಯ ಪರಾರಿಯಾಗಿರುವ ಆತನ ಹುಡುಕಾಟ ಆರಂಭಿಸಿದ್ದೇವೆ' ಎಂದಿದ್ದಾರೆ.

ಅಲ್ಲದೇ 'ಟ್ರಾಫಿಕ್ ಸಿಗ್ನಲ್ ಬಳಿ ಆರೋಪಿಗೆ ಕಾರು ನಿಲ್ಲಿಸುವಂತೆ ತಿಳಿಸಿದ್ದ ಸಂದೀಪ್, ಆತನನ್ನು ಹೊರ ಬರುವಂತೆ ಸೂಚಿಸಿದ್ದರು. ಈ ವೇಳೆ ಆರೋಪಿ ತನ್ನ ಗೆಳತಿಯೊಂದಿಗೆ ಕಾರಿನಲ್ಲಿದ್ದ. ಸಂದೀಪ್ ಆದೇಶದಂತೆ ಕಾರಿನಿಂದ ಹೊರ ಬಂದ ಆರೋಪಿ, ವರಿಗೆ ಗುಂಡು ಹೊಡೆದು, ಶಾಪಿಂಗ್ ಮಾಲ್ ಕಡೆ ತೆರಳಿ ಪರಾರಿಯಾಗಿದ್ದಾರೆ' ಎಂದಿದ್ದಾರೆ.

ಈ ಹಿಂದೆ ಅಮೆರಿಕಾದಲ್ಲಿ ಹ್ಯಾರಿಕೇನ್ ಚಂಡಮಾರುತ ಅಪ್ಪಳಿಸಿದಾಗ ಸಂದೂಈಪ್ ಹಲವರನ್ನು ರಕ್ಷಿಸಿ, ಸಹಾಯ ಮಾಡಿದ್ದರು. ಈ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅಲ್ಲದೇ 2015ರಲ್ಲಿ ಸಿಖ್ ಪೊಲೀಸ್ ಅಧಿಕಾರಿಯಾಗಿ ದಾಖಲೆ ಬರೆದಿದ್ದರು. ತನ್ನ ಸಮುದಾಯದ ಕುರಿತು ಭಾರೀ ಹೆಮ್ಮೆ ಹೊಂದಿದ್ದ ಸಂದೀಪ್ ಸಿಖ್ಖರ ಒಗ್ಗಟ್ಟಿಗ್ಗಾಗಿ ಬಹಳಷ್ಟು ಶ್ರಮಿಸಿದರು.