ಡಿಕೆಶಿ ಕೈಯಿಂದ ಆಗದೇ ಇದ್ದದ್ದು ಸಿದ್ದರಾಮಯ್ಯರಿಂದ ಸಾಧ್ಯವಾಯ್ತು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Oct 2018, 8:03 PM IST
Finally Former CM Siddaramaiah Solved Disgruntled in Congress for Bellary Byelection
Highlights

ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮತ್ತೆ ಪವರ್ ಸೆಂಟರ್ ಆಗಿದ್ದಾರೆ.

 

ಬೆಂಗಳೂರು, (ಅ.12) : ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿನ ಕಗ್ಗಂಟನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಡಿಸಿದ್ದಾರೆ.

ಬಳ್ಳಾರಿ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿಬುಗಿಲೆದ್ದ ಭಿನ್ನಮತವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬ್ರೇಕ್ ಹಾಕಿದ್ದು, ಬಳ್ಳಾರಿಯ ಎಲ್ಲಾ ಶಾಸಕರಿಗೆ ಶಾಂತಿ ಪಾಠ ಮಾಡಿ ಮತ್ತೆ ಪವರ್ ಸೆಂಟರ್ ಆಗಿದ್ದಾರೆ.

ಡಿಕೆಶಿ ಸಭೆಗೆ ಗೈರು ಹಾಜರಾದ ನಾಲ್ವರು ಕೈ ಶಾಸಕರು

ಲೋಕಸಭಾ ಉಪಚುನಾವಣೆ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಹೆಗಲಿಗೆ ಹಾಕಾಲಾಗಿತ್ತು. ಆದರೆ, ಸರ್ವ ಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆಶಿ ಕರೆದ ಸಭೆಗೆ ಜಿಲ್ಲೆಯ ಆರು ಜನ ಶಾಸಕರು ಗೈರಾರುವ ಮೂಲಕ ಅಸಮಾಧಾನ ಹೊರಹಾಕಿದ್ದರು.

ಈ ಹಿಂದೆ ಸಚಿವ ಡಿ.ಕೆ. ಶಿವಕುಮಾರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಕರೆದರೂ ಖ್ಯಾರೆ ಎಂದಿರಲಿಲ್ಲ. ಇದೀಗ ಇಂದು (ಶುಕ್ರವಾರ) ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲಾ ಶಾಸಕರು ಹಾಜರಾಗಿದ್ದಾರೆ.

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತಷ್ಟು ಕಗ್ಗಂಟು

ಶಾಸಕರಾದ ಪರಮೇಶ್ವರ ನಾಯ್ಕ, ಭೀಮಾ ನಾಯ್ಕ, ಆನಂದ ಸಿಂಗ್, ನಾಗೇಂದ್ರ, ತುಕಾರಾಮ್ ಹಾಗೂ ಶಾಸಕ ಗಣೇಶ್ ಸಭೆಗೆ ಹಾಜರಾಗಿದ್ದರು. ಈ ಮೂಲಕ ಸಿದ್ದು ನಾಯಕತ್ವಕ್ಕೆ ಜೈ ಎಂದಿದ್ದು, ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಗೆ ಸೆಡ್ಡು ಹೊಡೆದಿದ್ದಾರೆ.

ಸಭೆಯಲ್ಲಿ ಎಲ್ಲಾ ಶಾಸಕರಿನ್ನು ಗಣನೆ ಗೆದುಕೊಂಡ ಸಿದ್ದು ಭರ್ಜರಿ ಶಾಂತಿ ಪಾಠ ಮಾಡಿದ್ದಾರೆ. ಸರ್ವಾನುಮತದಿಂದ ಅಭ್ಯರ್ಥಿ ಆಯ್ಕೆ ಕೊನೆ ಹಂತಕ್ಕೆ ಬಂದು ನಿಂತಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.

loader