ಮೂಡುಬಿದಿರೆಯಲ್ಲಿ ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ

First Published 4, Jul 2018, 7:29 AM IST
Father Sexually Harassing His Daughter
Highlights

ಜನ್ಮ ನೀಡಿದ ಅಪ್ಪನೇ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಂದೆ ವಿರುದ್ಧ ಮೂಡುಬಿದಿರೆ ಪೊಲೀಸರು ಪೋಕ್ಸೊ ಕಾಯ್ದೆ ದಾಖಲಿಸಿಕೊಂಡಿದ್ದಾರೆ. 

ಮೂಡುಬಿದಿರೆ: ಜನ್ಮ ನೀಡಿದ ಅಪ್ಪನೇ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಂದೆ ವಿರುದ್ಧ ಮೂಡುಬಿದಿರೆ ಪೊಲೀಸರು ಪೋಕ್ಸೊ ಕಾಯ್ದೆ ದಾಖಲಿಸಿಕೊಂಡಿದ್ದಾರೆ. 

ಕೇರಳ ಮೂಲದ ವಿಕ್ರಂ ಪಿಳ್ಳೆ ಆರೋಪಿ. ಈತ ಪುಚ್ಚೆಮೊಗರಿನಲ್ಲಿ ಜಾರ್ಖಂಡ್‌ ಮೂಲದ ತನ್ನ ಪತ್ನಿ ಹಾಗೂ ಮಗಳ ಜತೆ ವಾಸವಿದ್ದನು. ಈತನ ಮಗಳು ಇತ್ತೀಚೆಗೆ ರಾತ್ರಿ ಮನೆ ಹೊರಗಡೆ ಮಲಗುತ್ತಿದ್ದಳು. 

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಕೆಯನ್ನು ಮಂಗಳೂರಿನ ಮಕ್ಕಳ ರಕ್ಷಣೆ ಕೇಂದ್ರಕ್ಕೆ ಕರೆತಂದು ವಿಚಾರಿಸಿದಾಗ ತನ್ನ ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂಬ ವಿಚಾರ ಬಾಯಿಬಿಟ್ಟಿದ್ದಾಳೆ. 

ಬಳಿಕ ರಕ್ಷಣಾ ಕೇಂದ್ರದ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

loader