ಕೇಂದ್ರ ಸರ್ಕಾರ ವಿರುದ್ಧ ಅನ್ನದಾತನ ಆಕ್ರೋಶ ಹೆಚ್ಚಾಗಿದೆ. ಆದರೆ ಚಳುವಳಿ ಬೇರೆ ದಿಕ್ಕನ್ನು ಪಡೆದುಕೊಳ್ಳುತ್ತಿದೆ. ಜಿಯೋ ಸಿಮ್‌ನಿಂದ ಏರ್‌ಟೆಲ್ ಸಿಮ್ ಪೋರ್ಟ್ ಚಳುವಳಿ ಆರಂಭಗೊಂಡಿದೆ. ಹೊಸ ವರ್ಷದಿಂದ ಟಿವಿ ಸೇರಿದಂತೆ ಗೃಹಉಪಯೋಗಿ ವಸ್ತುಗಳ ಬೇಲೆ ಏರಿಕೆಯಾಗುತ್ತಿದೆ. ದನದ ಮಾಂಸದ ವಿಚಾರವಾಗಿ ಸಿದ್ದರಾಮಯ್ಯ ಜಟಾಪಟಿ ಶುರುವಾಗಿದೆ. 2ನೇ ಟೆಸ್ಟ್‌ನಲ್ಲಿ ಭಾರತ ಬಿಗಿ ಹಿಡಿತ, ರಾಜ್ಯದ ಜನತೆಗೆ ಬಿಎಸ್‌ವೈ ಶಾಕ್ ಸೇರಿದಂತೆ ಡಿಸೆಂಬರ್ 28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ರೈತರ ಆಕ್ರೋಶ, 1300 ಜಿಯೋ ಮೊಬೈಲ್ ಟವರ್ ಧ್ವಂಸ!...
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಭಾರೀ ಪ್ರತಿಭಟನೆಯಲ್ಲಿ ನಿರತವಾಗಿರುವ ಪಂಜಾಬ್ ರೈತರು, ಶನಿವಾರ ರಾತ್ರೋರಾತ್ರಿ ರಾಜ್ಯದಲ್ಲಿರುವ 150ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಧ್ವಂಸ ಮಾಡಿದ್ದಾರೆ. ಇದರೊಂದಿಗೆ ಪಂಜಾಬ್‌ನಲ್ಲಿ ಈವರೆಗೆ ಒಟ್ಟಾರೆ 1338 ಟವರ್‌ಗಳು ಹಾನಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಗೆಳತಿ ದೂರವಾದಳು ಎಂದು ಈತ ಮಾಡಿದ ಮಹಾನ್ 'ನಕಲಿ' ಕೆಲಸ!...
ಈತ ಕಿಲಾಡಿ ಕೆಲಸ ಒಂದನ್ನು ಮಾಡಿದ್ದಾನೆ. ತನ್ನ ಮಾಜಿ ಗೆಳತಿ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ತೆರೆದು ಆಕೆಯದ್ದೆ ತಿರುಚಿದ ಅಶ್ಲೀಲ ಪೋಟೋಗಳನ್ನು ಆ ಖಾತೆಯ ಮೂಲಕ ಶೇರ್ ಮಾಡಿಕೊಂಡಿದ್ದಾನೆ.
ಕ್ರೀಡಾ ಚಟುವಟಿಕೆ ಆರಂಭಿಸಲು SOP ಪ್ರಕಟಿಸಿದ ಕೇಂದ್ರ; ಫ್ಯಾನ್ಸ್‌ಗೆ ಅರ್ಧ ಸಿಹಿ, ಅರ್ಧ ಕಹಿ!...
ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಕ್ರೀಡಾ ಚಟುವಟಿಕೆ ಪುನರ್ ಆರಂಭಿಸಲು ಕೇಂದ್ರ ಸರ್ಕಾರ ಇದೀಗ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP) ಪ್ರಕಟಿಸಿದೆ. ಇದೀಗ ಕ್ರೀಡಾ ಸ್ಪರ್ಧೆ ಪುನರ್ ಆರಂಭಿಸಲು, ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಅವಕಾಶ ಸೇರಿದಂತ ಹಲವು ಸೂಚನೆಗಳನ್ನು ಕೇಂದ್ರ SOP ಮೂಲಕ ಪ್ರಕಟಿಸಿದೆ.
ಅಂಬಾನಿ-ಅದಾನಿ ಪರ ಕೇಂದ್ರ?: ಮೋದಿ ಸರ್ಕಾರಕ್ಕೆ ಸಡ್ಡು ಹೊಡೆದ ಅನ್ನದಾತರು..!...
ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸಾಮೂಹಿಕವಾಗಿ ಜಿಯೋ ಸಿಮ್‌ನಿಂದ ಏರ್‌ಟೆಲ್ ಸಿಮ್‌ಗೆ ಪೋರ್ಟ್ ಆಗಲು ನಿರ್ಧರಿಸಿದ್ದಾರೆ.
ನಿಮ್ಮ ಟಿವಿ ಸ್ಕ್ರೀನ್ ಮೇಲೂ ಕಾಣುತ್ತಾ ಇಂತಹ ನಂಬರ್? ಕಡೆಗಣಿಸಬೇಡಿ, ಎಚ್ಚರ!...
ಇಂದು ಬಹುತೇಕ ಎಲ್ಲರ ಮನೆಯಲ್ಲೂ ಟಿವಿ ಇದೆ, ಹಾಗೂ ಇಸನ್ನು ವೀಕ್ಷಿಸುವವರಿದ್ದಾರೆ. ಇನ್ನು ಇದನ್ನು ವೀಕ್ಷಿಸುವ ಪರಿ ಬಹುತೇಕ ಎಲ್ಲರದ್ದೂ ಸಮನಾಗಿರುತ್ತದೆಡ. ಎಲ್ಲಿಯವರೆಗೆ ಟಿವಿಯಲ್ಲಿ ಬರುವ ಕಾರ್ಯಕ್ರಮ ಹಿಡಿಸುತ್ತದೋ ಅಲ್ಲಿಯವರೆಗೆ ವೀಕ್ಷಿಸುತ್ತಿರುತ್ತಾರೆ
ಜನವರಿಯಿಂದ ಟೀವಿ, ಫ್ರಿಜ್ ಬೆಲೆ ಶೇ.10ರವರೆಗೂ ಏರಿಕೆ!...
ಹೊಸ ವರ್ಷದ ಸಂಭ್ರಮದಲ್ಲಿ ಟೀವಿ, ರೆಫ್ರಿಜರೇಟರ್‌ನಂತಹ ಗÜೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಆಲೋಚನೆ ಇದ್ದರೆ, ಡಿ.31ರೊಳಗೇ ಖರೀದಿ ಮಾಡಿಬಿಡಿ. ಏಕೆಂದರೆ ಜನವರಿಯಿಂದ ಈ ವಸ್ತುಗಳ ಬೆಲೆ ಶೇ.10ರವರೆಗೂ ಏರಿಕೆಯಾಗಲಿದೆ.
ಹೋಂಡಾ ಗ್ರೇಜಿಯಾ ಖರೀದಿ ಮೇಲೆ 5000 ರೂ. ಕ್ಯಾಶ್‌ಬ್ಯಾಕ್ ಆಫರ್...
ಹೋಂಡಾ ಸ್ಕೂಟರ್‌ಗಳು, ದ್ವಿಚಕ್ರವಾಹನಗಳು, ಪ್ರೀಮಿಯಂ ಬೈಕುಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಹೊಂದಿವೆ. ಗ್ರೇಜಿಯಾ 125 ಸ್ಕೂಟರ್‌ಗೂ ಒಳ್ಳೆಯ ಪ್ರತಿಕ್ರಿಯೆ ಇದೆ. ಕಂಪನಿ ಈ ಸ್ಕೂಟರ್ ಖರೀದಿ ಮೇಲೆ ಶೇ.5 ಅಂದರೆ 5000 ರೂ.ವರೆಗೂ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ. ಇದು ಆಯ್ದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇಎಂಐ ಮೇಲೆ ಮಾತ್ರ ಲಭ್ಯವಿದೆ.
'ನಾನು ದನದ ಮಾಂಸ ತಿಂತೀನಿ, ಬೇಡ ಅನ್ನೋಕೆ ನೀನು ಯಾವನು..?...
ಯಾರು ಏನ್ ತಿನ್ನಬೇಕು, ತಿನ್ನಬಾರದು ಎನ್ನುವ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಗುಡುಗಿದ್ದಾರೆ.
ರಾಜ್ಯದ ಜನತೆಗೆ ಬಿಗ್ ಶಾಕ್ ಕೊಟ್ಟ ಯಡಿಯೂರಪ್ಪ ಸರ್ಕಾರ...
ಹೊಸ ವರ್ಷದ ಸಮಯದಲ್ಲಿ ರಾಜ್ಯದ ಜನತೆಗೆ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.
ಬಾಕ್ಸಿಂಗ್ ಡೇ ಟೆಸ್ಟ್; 3ನೇ ದಿನ ಭಾರತದ ಬಿಗಿ ಹಿಡಿತ, ಸಂಕಷ್ಟದಲ್ಲಿ ಆಸೀಸ್ ಪಡೆ!...
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 28, 2020, 4:58 PM IST