Asianet Suvarna News Asianet Suvarna News

ಭಾರತ್ ಬಂದ್ ಯಶಸ್ವಿಯಾಗೋದು ಡೌಟ್, ದಾಖಲೆಗೆ ಸಜ್ಜಾದ ವಿರಾಟ್; ಸೆ.26ರ ಟಾಪ್ 10 ಸುದ್ದಿ!

ರೈತ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್‌ಗೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ. ಇತ್ತ ಉತ್ತರ ಪ್ರದೇಶದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ನಡೆಯುತ್ತಿದೆ. ಮುಂಬೈ ವಿರುದ್ಧ ದಾಖಲೆ ಬರೆಯಲು ನಾಯಕ ವಿರಾಟ್ ಸಜ್ಜಾಗಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಮೀಸಲಾಟಿ ಕಂಟಕ, ಎಲನ್ ಮಸ್ಕ್‌ ದಂಪತಿ ಡೈವೋ​ರ್ಸ್‌ ಸೇರಿದಂತೆ ಸೆಪ್ಟೆಂಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
Farmers calls Bharat bandh to RCB captain Virat kohli top 10 News of september 26 ckm
Author
Bengaluru, First Published Sep 26, 2021, 5:12 PM IST
  • Facebook
  • Twitter
  • Whatsapp

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬಿಜೆಪಿಯ ರಣತಂತ್ರ: ಯೋಗಿ ಸಂಪುಟ ವಿಸ್ತರಣೆ!

Farmers calls Bharat bandh to RCB captain Virat kohli top 10 News of september 26 ckm

ಉತ್ತರ ಪ್ರದೇಶ ಚುನಾವಣೆಗೆ(Uttar Pradesh Elections) ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹೀಗಿರುವಾಗ ಪ್ರಮುಖ ಸದ್ದಿಯೊಂದು ಹೊರ ಬಿದ್ದಿದೆ. ಮಾಧ್ಯಮ ವರದಿಗಳ ಅನ್ವಯ ಇಂದು, ಭಾನುವಾರ ಯೋಗಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ

ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಹುಟ್ಟುಹಬ್ಬಕ್ಕೆ ಶುಭಕೋರಿದ ನರೇಂದ್ರ ಮೋದಿ!

Farmers calls Bharat bandh to RCB captain Virat kohli top 10 News of september 26 ckm

ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಮನ್‌ಮೋಹನ್ ಸಿಂಗ್‌ಗೆ ಹುಟ್ಟು ಹಬ್ಬದ ಸಂಭ್ರಮ. ಸಿಂಗ್ ಇಂದು 89ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮನ್‍‌ಮೋಹನ್ ಸಿಂಗ್‌ಗೆ ಕಾಂಗ್ರೆಸ್ ನಾಯಕರು, ದೇಶ ವಿದೇಶಗಳ ಗಣ್ಯರು ಶುಭಕೋರಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದೇ ವೇಳೆ ಉತ್ತಮ ಆರೋಗ್ಯಕ್ಕಾಗಿ  ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಮನ್‌ ಕಿ ಬಾತ್: ನದಿಗಳ ಮಹತ್ವ ತಿಳಿಸಿದ ಮೋದಿ, ಖಾದಿ ಬಳಕೆಗೂ ಕರೆ!

Farmers calls Bharat bandh to RCB captain Virat kohli top 10 News of september 26 ckm

ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾರತ ತಲುಪಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಭಾನುವಾರ ಮನ್‌ ಕಿ ಬಾತ್(Mann Ki Baat) ಕಾರ್ಯಕ್ರಮದ ಮೂಲಕ ದೇಶವನ್ನುದ್ದೆಶಿಸಿ ಮಾತನಾಡಿದ್ದಾರೆ. ಭಾನುಲಿ ಕಾರ್ಯಕ್ರಮ ಮನ್‌ ಕೀ ಬಾತ್‌ ಸರಣಿಯ 81ನೇ ಸಂಚಿಕೆಯಲ್ಲಿ ಮಾತನಾಡಿದ ಪಿಎಂ ಮೋದಿ ವಿಶ್ವ ನದಿಗಳ ದಿನವನ್ನು(World River Day) ನೆನಪಿಸಿ, ನದಿಗಳ ಮಹತ್ವದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಇದೇ ವೇಳೆ ದೇಶದ ಜನತೆಗೆ ಖಾದಿ ಬಳಕೆಗೂ ಕರೆ ನೀಡಿದ್ದಾರೆ.

ರೈತರಿಂದ ನಾಳೆ ಭಾರತ್‌ ಬಂದ್‌: ಆದರೆ ಯಶಸ್ಸು ಡೌಟ್‌!

Farmers calls Bharat bandh to RCB captain Virat kohli top 10 News of september 26 ckm

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆಗಳನ್ನು(Farm Bill) ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ದೇಶಾದ್ಯಂತ ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ(Bharat bandh) ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.

ಈ ಕಾರಣದಿಂದ ಅಥಿಯಾ ಶೆಟ್ಟಿ ಮೇಲೆ ಅಸಮಾಧಾನಗೊಂಡಿರುವ ಕೆಎಲ್‌ ರಾಹುಲ್‌!

Farmers calls Bharat bandh to RCB captain Virat kohli top 10 News of september 26 ckm

ಎರಡನೇ ಹಂತದ IPL ಯುಎಇಯಲ್ಲಿ ನಡೆಯುತ್ತಿದೆ. ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ (KL Rahul) ಮತ್ತು ಚಲನಚಿತ್ರ ನಟಿ ಅಥಿಯಾ ಶೆಟ್ಟಿ (Athiya Shetty) ನಡುವಿನ ಸಂಬಂಧದ ಸುದ್ದಿಗಳು ಬಹಳ ದಿನಗಳಿಂದ ಹರಿದಾಡುತ್ತಿದೆ. 

IPL 2021: ಮುಂಬೈ ಎದುರಿನ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿ ರೆಡಿ..!

Farmers calls Bharat bandh to RCB captain Virat kohli top 10 News of september 26 ckm

ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಹಾಗೂ ರನ್‌ ಮಷೀನ್‌ ವಿರಾಟ್ ಕೊಹ್ಲಿ ಇದೀಗ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಮುಂಬೈ ಇಂಡಿಯನ್ಸ್‌ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ವಿರಾಟ್ ಕೊಹ್ಲಿ ಅಪರೂಪದ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. 

ವಿಕ್ಕಿ ಕೌಶಲ್ ಜೊತೆ ಹೀಗೆಲ್ಲ ಕಾಣಿಸಿಕೊಂಡ್ರಾ ರಶ್ಮಿಕಾ.. ಛೀ ಅಂತಿದ್ದಾರೆ ಅಭಿಮಾನಿಗಳು

Farmers calls Bharat bandh to RCB captain Virat kohli top 10 News of september 26 ckm

ಸೌತ್‌ ಇಂಡಿಯನ್‌ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ಬಾಲಿವುಡ್‌ ಮೂವಿಗಳಲ್ಲೂ ಮಿಂಚುತ್ತಿರುವ ರಶ್ಮಿಕಾ ಇದೀಗ ಮತ್ತೆ ಟ್ರೋಲಿಗೊಳಗಾಗಿದ್ದಾರೆ. ಕಾರಣ ವಿಕ್ಕಿ ಕೌಶಲ್‌ ಜೊತೆಗೆ ಆಕೆ ಕಾಣಿಸಿಕೊಂಡ ರೀತಿ. ಈಗ ಇದೆಲ್ಲ ಬೇಕಿತ್ತಾ ಅನ್ನುತ್ತಲೇ ಛೀ ಅಂತ ಮುಖ ತಿರುಗಿಸುತ್ತಿದ್ದಾರೆ ಆಕೆಯ ಫ್ಯಾನ್ಸ್.

ಮತ್ತೊಂದು ಹೈಪ್ರೊ​ಫೈಲ್‌ ವಿಚ್ಛೇದ​ನ: ಮಸ್ಕ್‌ ದಂಪತಿ ಡೈವೋ​ರ್ಸ್‌!

Farmers calls Bharat bandh to RCB captain Virat kohli top 10 News of september 26 ckm

ಲಾಸ್‌ ಏಂಜಲೀಸ್‌(ಸೆ.26): ಇತ್ತೀ​ಚೆ​ಗಷ್ಟೇ ವಿಶ್ವದ ಅತಿ ಸಿರಿ​ವಂತ ವ್ಯಕ್ತಿ​ಗ​ಳಲ್ಲಿ ಒಬ್ಬ​ರಾದ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇ​ದನ(Divorce) ನೀಡಿ​ದ್ದರು. ಇದರ ಬೆನ್ನಲ್ಲೇ ಶತಕೋಟ್ಯಧಿಪತಿ ಎಲಾನ್‌ ಮಸ್ಕ್‌(Elon Musk) ಹಾಗೂ ಅವ​ರ ಪತ್ನಿ, ಗಾಯಕಿ ಗ್ರಿಮ್ಸ್‌(Grimes) ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ.

ಮೀಸಲಾತಿ ಸಂಕಟ: ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಸ್ವಾಮೀಜಿ

Farmers calls Bharat bandh to RCB captain Virat kohli top 10 News of september 26 ckm

ಮೀಸಲಾತಿ ಹೋರಾಟವನನ್ನ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಅಕ್ಟೋಬರ್ 1ರಂದು ಸರ್ಕಾರದಿಂದ ಸಂದೇಶ ಬರದಿದ್ದರೆ ಮತ್ತೆ ಧರಣಿ ನಡೆಸಲಿದ್ದೇವೆ ಅಂತ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಹೇಳಿದ್ದಾರೆ. 

Follow Us:
Download App:
  • android
  • ios