ಬೆಂಗಳೂರು :  ಕಾವೇರಿ ನದಿಯಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಪ್ರವಾಹದಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿರುವ ತಮಿಳುನಾಡು ಸರ್ಕಾರ ಕಾವೇರಿ ನದಿಯ ನೀರನ್ನು ಉತ್ತರ ಕರ್ನಾಟಕದ ಮಲಪ್ರಭಾ ನದಿಗೆ ತಿರುಗಿಸಿ ಎಂದು ಬೇಡಿಕೆ ಇಟ್ಟಿದೆ.

ಅಲ್ಲದೇ ಈ ಯೋಜನೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ. ಹೀಗಾಗಿ ಗೋವಾದ ಕ್ಯಾತೆ ಇಲ್ಲದೇ ಮಹದಾಯಿ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸಿವೆ. ಆದರೆ, ಮುಂದಿನ ವರ್ಷ ಮಳೆ ಆಗದೇ ಇದ್ದರೆ ಆ ನೀರನ್ನು ತಮಗೇ ಬಿಡಬೇಕು ಎಂದು ತಮಿಳುನಾಡು ಷರತ್ತು ವಿಧಿಸಿದೆ. ಹೀಗಾಗಿ ತಮಿಳುನಾಡಿಗೆ ಇನ್ನಷ್ಟುನೀರನ್ನು ಬಿಟ್ಟು ಪ್ರವಾಹ ಸೃಷ್ಟಿಸಿ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.