ತಿರುವನಂತಪುರ [ಸೆ.04]: ಅತ್ಯಾಧುನಿಕ ಕ್ಯಾಪ್ಸೂಲ್ ಬಾಂಬ್ ಬಳಸಿ ಕೇರಳದ ಐಪಿಎಸ್ ಅಧಿಕಾರಿ ದಂಪತಿಯನ್ನು ಐಸಿಸ್ ಜಿಹಾದಿ ಹತ್ಯೆ ಸುದ್ದಿ ಕೇರಳದಾದ್ಯಂತ ಹರಿದಾಡುತ್ತಿದೆ.

ಐಪಿಎಸ್ ಅಧಿಕಾರಿಯನ್ನು ಹತ್ಯೆ ಮಾಡಿದರೂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಅಸಮರ್ಥವಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್ ಗಳು ಹರಿದಾಡುತ್ತಿವೆ.

ಸ್ವತಃ ಐಪಿಎಸ್ ಅಧಿಕಾರಿಗೆ ರಕ್ಷಣೆಯಿಲ್ಲದಿದ್ದರೆ  ಇನ್ನು ಸಾಮಾನ್ಯರ ರಕ್ಷಣೆಯೇನು ಎಂದು ಟ್ವಿಟರ್ ಗಳಲ್ಲಿ ಪ್ರಶ್ನಿಸುತ್ತಿರುವ ಸುದ್ದಿಗಳು ಚರ್ಚೆಗೊಳಗಾಗುತ್ತಿವೆ. ಈ ರೀತಿಯ ಪೋಸ್ಟ್ ಒಂದು 1300 ಬಾರಿ ಶೇರ್ ಗಳಾಗಿದ್ದು 3 ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. ವಾಸ್ತವದಲ್ಲಿ ಈ ಸುದ್ದಿಯನ್ನು ಪರಿಶೀಲಿಸಿದಾಗ ಸತ್ಯಾಂಶ ಬಯಲಾಗಿದೆ.

ಆದರೆ ಈ ಸುದ್ದಿಯ ವಾಸ್ತವತೆಯ ಮೂಲವನ್ನು ಹುಡುಕಿದಾಗ ಇದೊಂದು ಸುಳ್ಳು ಸುದ್ದಿಯಾಗಿದೆ. ಮಲಯಾಳಂನ ಪ್ರಸಿದ್ಧ ಟಿವಿ ಶೋ  ಪರಸ್ಪರಂ ಧಾರಾವಾಹಿಯ ಒಂದು ಭಾಗದ ದೃಶ್ಯವಾಗಿದ್ದು ಕಿಡಿಗೇಡಿಗಳು ಇದನ್ನು ದುರುದ್ದೇಶದಿಂದ ಟ್ರೋಲ್ ಮಾಡಿದ್ದಾರೆ. ಸಂತೋಷ್ ಕುಮಾರ್ ಪಾಸ್ವಾನ್ ಎಂಬಾತ ಈ ಸುಳ್ಳು ಸುದ್ದಿಯನ್ನು ಹರಡಿದ್ದಾನೆ. ಸ್ಥಳೀಯ ಪೊಲೀಸರು ಕೂಡ ಈ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.